ಬೇರೊಬ್ಬರ ಕಥೆಯನ್ನು ನಾನು ಹೇಗೆ ನೋಡಬಹುದು?

ನೀವು ಹಿಂಬಾಲಿಸುತ್ತಿರುವ ವ್ಯಕ್ತಿಗಳ ಸ್ಟೋರಿಯನ್ನು ನೀವು ನೋಡಬಹುದು. ಯಾವುದೇ ಬಳಕೆದಾರರು ಸ್ಟೋರಿಯನ್ನು ಹಾಕಿದರೆ ಅವರ ಪ್ರೊಫೈಲ್ ಸುತ್ತ ಒಂದು ಬಣ್ಣದ ವರ್ತುಲವನ್ನು ನೀವು ನೋಡಬಹುದು. ಇತರರ ಸ್ಟೋರಿಯನ್ನು ಕೆಳಗಿನ ವಿಧಾನಗಳಿಂದ ನೋಡಬಹುದು:

 

ಪ್ರತಿಲಿಪಿ ಹೋಂ ಪೇಜ್'ನ ಮೇಲ್ಭಾಗದಲ್ಲಿ ನೀವು ಹಿಂಬಾಲಿಸುತ್ತಿರುವ ಬಳಕೆದಾರರ ಸ್ಟೋರಿ ಕಾಣಿಸಿಕೊಳ್ಳುತ್ತದೆ. ಆ ಬಳಕೆದಾರರ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ ಸ್ಟೋರಿಯನ್ನು ನೋಡಬಹುದು.

ಅಥವಾ ಆ ವ್ಯಕ್ತಿಯ ಪ್ರೊಫೈಲ್'ಗೆ ಭೇಟಿ ನೀಡಿ ಅಲ್ಲಿಯೂ ಸ್ಟೋರಿಯನ್ನು ನೋಡಬಹುದು.

 

ನೀವು ಪ್ರತಿಲಿಪಿ ಹೋಂ ಪೇಜ್'ನ ಮೇಲ್ಭಾಗದಲ್ಲಿ ಕಾಣಿಸುವ ಸ್ಟೋರಿಯನ್ನು ನೋಡುವಾಗ, ಒಬ್ಬರ ಸ್ಟೋರಿ ನೋಡಿದ ನಂತರ ಇನ್ನೊಬ್ಬರ ಸ್ಟೋರಿಯನ್ನು ತಾನೇತಾನಾಗಿ ನೋಡಬಹುದು. ಒಂದೊಮ್ಮೆ ನಿಮಗೆ ಹಾಗೆ ಸ್ಟೋರಿಯನ್ನು ನೋಡಲು ಇಷ್ಟವಿಲ್ಲದಿದ್ದಲ್ಲಿ ಬಲ ಅಥವಾ ಎಡಕ್ಕೆ ಸ್ವೈಪ್ ಮಾಡುವುದರ ಮೂಲಕ ಸ್ಟೋರಿ ನೋಡುವುದನ್ನು ನಿಲ್ಲಿಸಬಹುದು.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?