ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಸೌಲಭ್ಯ ಎಂದರೇನು?

ನೀವು ನಿಮ್ಮಿಷ್ಟದ ಅರ್ಹ ಸಾಹಿತಿಗಳನ್ನು 25 ರೂಪಾಯಿಗಳ ತಿಂಗಳ ಸಬ್ಸ್ಕ್ರಿಪ್ಷನ್ ಆಧಾರದ ಮೇಲೆ ಸಬ್ಸ್ಕ್ರೈಬ್ ಮಾಡಿ ಬೆಂಬಲಿಸುವ ಮತ್ತು ಕೆಲವು ಸೌಲಭ್ಯಗಳನ್ನು ಅಧಿಕವಾಗಿ  ಹೊಂದುವ ಅವಕಾಶವನ್ನು ನೀಡುತ್ತಿದ್ದೇವೆ.ಇದಕ್ಕೆ ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಕಾರ್ಯಕ್ರಮ ಎನ್ನಲಾಗುತ್ತದೆ. ಇದಕ್ಕೆ 25 ರೂಪಾಯಿ ತಿಂಗಳಶುಲ್ಕವಿರುತ್ತದೆ. ನಿಮ್ಮ ಮೆಚ್ಚಿನ ಸಾಹಿತಿ ತನ್ನ ಬುದ್ಧಿಶಕ್ತಿ ಮತ್ತು ಸಮಯಗಳನ್ನು ವ್ಯಯಿಸಿ ಕೃತಿ ರಚಿಸಿರುತ್ತಾರೆ. ಅವರನ್ನು ಒಂದು ಚಿಕ್ಕ ಗೌರವಧನದ ಮೂಲಕ ಪ್ರೋತ್ಸಾಹಿಸಲು ಪ್ರತಿಲಿಪಿ ಅವಕಾಶ ನೀಡುತ್ತಿದೆ. ಇದರಿಂದ ನಿಮಗೆ ದೊರಕುವ ವಿಶೇಷ ಸೌಲಭ್ಯಗಳು.  

  • ನೀವು ಸಬ್ಸ್ಕ್ರೈಬ್ ಮಾಡಿದ ಸಾಹಿತಿ ಬರೆಯುತ್ತಿರುವ ಧಾರಾವಾಹಿಯ ಹೊಸ ಅಧ್ಯಾಯಗಳು ಪ್ರಕಟವಾದ ಶೀಘ್ರ ಓದಿನ ದೊರಕುತ್ತವೆ. ಸಬ್ಸ್ಕ್ರೈಬ್ ಮಾಡದ ಓದುಗರು ಉಚಿತವಾಗಿ ಓದುವ ಅವಕಾಶವನ್ನು  5 ದಿನಗಳ ಬಳಿಕ ಪಡೆಯುತ್ತಾರೆ.

  • ಓದುಗರನ್ನು ಸೂಪರ್ ಫ್ಯಾನ್ ಎಂಬ ಬ್ಯಾಡ್ಜ್ ಮೂಲಕ ಗುರುತಿಸಲಾಗುವುದರಿಂದ ಅವರು  ಬರಹಗಳಿಗೆ ನೀಡುವ ವಿಮರ್ಶೆಗಳು ಹೆಚ್ಚು ಮೌಲ್ಯಯುತವಾಗಿರುತ್ತವೆ.

  • ನಿಮ್ಮ ಪ್ರೊಫೈಲ್ ನೀವು ಸಬ್ಸ್ಕ್ರೈಬ್ ಮಾಡಿದ ಸಾಹಿತಿಗಳ ಪ್ರೊಫೈಲ್ ನಲ್ಲಿ ‘ಸೂಪರ್ ಫ್ಯಾನ್’  ಪಟ್ಟಿಯಡಿಯಲ್ಲಿ ಕಾಣಸಿಗುತ್ತದೆ.

  • ನೀವು ಸೂಪರ್ ಫ್ಯಾನ್ ಚಾಟ್ ರೂಮ್ ಸೌಲಭ್ಯಕ್ಕೆ ಅರ್ಹರಾಗುತ್ತೀರಿ. ಇದರ ಪ್ರಕಾರ ಆಯಾ ಅರ್ಹ ಬರಹಗಾರರು/ ಬರಹಗಾರ್ತಿಯರ ಗ್ರೂಪ್ ನಲ್ಲಿ ಸೂಪರ್ ಫ್ಯಾನ್ ಸಬ್ಸ್ಕ್ರೈಬರ್ ಗಳನ್ನು ಮಾತ್ರ ಒಳಗೊಂಡ ಒಂದು ಚಾಟ್ ಗ್ರೂಪ್ ಇರುತ್ತದೆ. ಇಲ್ಲಿ ಕೇವಲ ಆ ಲೇಖಕರು ಮತ್ತು ಅವರನ್ನು ಸಬ್ಸ್ಕ್ರೈಬ್ ಮಾಡಿದ ಹಿಂಬಾಲಕರು ಮಾತ್ರ ಇರುವರು. ಮತ್ತು ಇಲ್ಲಿ ನೆಡೆಯುವ ಚರ್ಚೆಗಳು ಇತರರಿಗೆ ಕಾಣಿಸುವುದಿಲ್ಲ. ಈ ಸೌಲಭ್ಯವನ್ನು ಇನ್ನೂ ಅಭಿವೃದ್ಧಿಪಡಿಸುತ್ತಿದ್ದು ಆದಷ್ಟು ಶೀಘ್ರ ಇದನ್ನು ನಿಮಗೆ ಒದಗಿಸುವ ಪ್ರಯತ್ನ ನೆಡೆಯುತ್ತಿದೆ. 

ನೀವು ಸಾಹಿತಿಯ ಪ್ರೊಫೈಲ್ ಗೆ ಭೇಟಿ ನೀಡಿದರೆ ಅವರ ಪ್ರೊಫೈಲ್ ಚಿತ್ರದ ಮೇಲ್ಭಾಗದಲ್ಲಿ ಒಂದು ಬಂಗಾರದ ಬಣ್ಣದ  ಬ್ಯಾಡ್ಜ್ ನೋಡುತ್ತೀರಿ. ಇದರರ್ಥ ಆ ಸಾಹಿತಿ ಸಬ್ಸ್ಕ್ರಿಪ್ಷನ್ ಸೌಲಭ್ಯ  ಹೊಂದಿದ್ದಾರೆ ಎಂದು.  ಇದಲ್ಲದೆ ಬೇರೆ ಬೇರೆ ಪ್ರಭೇದಗಳಲ್ಲಿ ಸಬ್ಸ್ಕ್ರಿಪ್ಷನ್ ಆಯ್ಕೆ ಹೊಂದಿರುವ ಸಾಹಿತಿಗಳನ್ನು ಪ್ರತಿಲಿಪಿ ಅಪ್ಲಿಕೇಶನ್ ಅಲ್ಲಿ ನೋಡಬಹುದು.

ಒಮ್ಮೆ ನೀವು ಸಬ್ಸ್ಕ್ರಿಪ್ಷನ್ ಗಾಗಿ ಹಣ ಪಾವತಿಸಿದರೆ, ಅದನ್ನು ಹಿಂದಿರುಗಿಸಲಾಗದು. ಅರ್ಧಕ್ಕೇ ನಿಲ್ಲಿಸಿದ ಧಾರಾವಾಹಿಯ ಕರ್ತೃವನ್ನು ನೀವು ಅನ್ ಸಬ್ಸ್ಕ್ರೈಬ್ ಮಾಡಬಹುದು.  

ನೀವು ಸಬ್ಸ್ಕ್ರೈಬ್ ಮಾಡಿದ ಸಾಹಿತಿ ಪ್ರಕಟಿಸುವ ಕೃತಿಗಳಿಗೆ ವಿಮರ್ಶೆಗಳನ್ನು ನೀಡಿದಾಗ ನಿಮ್ಮ ಹೆಸರು ಸೂಪರ್ ಫ್ಯಾನ್ ಬ್ಯಾಡ್ಜ್ ಅಡಿಯಲ್ಲಿಬರುವುದರಿಂದ ವಿಮರ್ಶೆಗಳಿಗೆ ಹೆಚ್ಚಿನ ಮೌಲ್ಯ ಲಭ್ಯವಾಗುತ್ತದೆ.

ನೀವು ನಿಮ್ಮ್ಮಿಷ್ಟದ ಸಾಹಿತಿಯ ಪ್ರೊಫೈಲ್ ಗೆ ಹೋಗಿ, ಸಬ್ಸ್ಕ್ರೈಬ್ ಮಾಡಬಹುದು. ಸಬ್ಸ್ಕ್ರೈಬ್ ಮಾಡಲು UPI  ಅಥವಾ ಡೆಬಿಟ್/ಕ್ರೆಡಿಟ್ ಕಾರ್ಡ್ ಮಾಹಿತಿ ನೀಡಬೇಕಾಗುತ್ತದೆ.

ಸಬ್ಸ್ಕ್ರಿಪ್ಷನ್ ಸೌಲಭ್ಯವು ನೀವು  ಸಬ್ಸ್ಕ್ರೈಬ್ ಮಾಡಿದ ದಿನದಿಂದ ಮೂವತ್ತು ದಿನಗಳವರೆಗೆ ಲಭ್ಯವಿರುತ್ತದೆ. ಆದ್ದರಿಂದ, ಇದರ ಬಿಲ್ಲಿಂಗ್ ನೀವು ಸಬ್ಸ್ಕ್ರೈಬ್ ಮಾಡಿದ ದಿನದ ಮೂವತ್ತನೆಯ ದಿನಕ್ಕೆ ಆರಂಭವಾಗುತ್ತದೆ. ಯಾವುದೇ ಕಾರಣಕ್ಕೆ ಪಾವತಿ ವಿಫಲವಾದಲ್ಲಿ, ಈ ಕುರಿತು ನೀವು ಇಮೇಲ್ ಪಡೆಯುತ್ತೀರಿ. ಮತ್ತು ನಿಮ್ಮ ಪಾವತಿವ್ಯವಸ್ಥೆಯನ್ನು ಸರಿಪಡಿಸಲು  ಏಳು ದಿನಗಳ ಗ್ರೇಸ್ ಅವಧಿಯನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಸಬ್ಸ್ಕ್ರಿಪ್ಷನ್ ಅವಧಿಯ ಎಲ್ಲ ಸೌಲಭ್ಯಗಳನ್ನು ನೀವು ಅನುಭವಿಸಬಹುದು. ಗ್ರೇಸ್ ಸಮಯ ಮುಗಿದ ಬಳಿಕವೂ ನೀವು ನಿಮ್ಮ ಪಾವತಿ ವ್ಯವಸ್ಥೆಯನ್ನು ಸರಿಪಡಿಸದಿದ್ದಲ್ಲಿ ನೀವು ಸಬ್ಸ್ಕ್ರಿಪ್ಷನ್ ಸೌಲಭ್ಯದಿಂದ ಹೊರಗುಳಿಯುತ್ತೀರಿ. ಹಾಗಿದ್ದರೂ ಹೊಸದಾಗಿ ನೀವು ಆ ಸಾಹಿತಿಯನ್ನು ಯಾವುದೇ ಸಮಯದಲ್ಲಿ ಸಬ್ಸ್ಕ್ರೈಬ್ ಮಾಡಬಹುದು.

ಈಗಾಗಲೇ ನಿಮ್ಮ ಖಾತೆಯಿಂದ ಹಣ ಪಾವತಿಯಾಗಿದ್ದಲ್ಲಿ ಅದನ್ನು ಹಿಂದಿರುಗಿಸಲು ಸಾಧ್ಯವಿಲ್ಲ. ಆದರೂ, ನೀವು ಸಬ್ಸ್ಕ್ರೈಬ್ ಮಾಡಿದ ದಿನದಿಂದ ಮೂವತ್ತು ದಿನಗಳವರೆಗೆ  ಈ ಯೋಜನೆಯ ಎಲ್ಲ ಪ್ರಯೋಜನ ಪಡೆಯುವಿರಿ. ಮೇಲಿನ ಪ್ರಕರಣದಲ್ಲಿ ಸಬ್ಸ್ಕ್ರೈಬ್ ಮಾಡಿದ ದಿನವೇ ಅನ್ ಸಬ್ಸ್ಕ್ರೈಬ್ ಮಾಡಿರುವಿರಾದ್ದರಿಂದ ಮುಂದಿನ ಮೂವತ್ತು ದಿನ ನೀವು ಯಾವುದೇ ಸಮಯದಲ್ಲಿ ಈ ಸೌಲಭ್ಯ ಹೊಂದಬಹುದು. ಮುಂದಿನ ತಿಂಗಳಿನಿಂದ ನಿಮ್ಮ ಅನ್ ಸಬ್ಸ್ಕ್ರಿಪ್ಷನ್ ಕಾರ್ಯಗತಗೊಳ್ಳುತ್ತದೆ. 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?