ಕಥೆಯನ್ನು ಋಣಾತ್ಮಕವಾಗಿ ರೇಟ್ ಮಾಡಿದ ಅನೇಕ ಜನರು ಅದನ್ನು ಓದಲು ಸಾಧ್ಯವಾಗಲಿಲ್ಲ. ನೀವು ಅವರ ರೇಟಿಂಗ್‌ಗಳನ್ನು ಅಳಿಸುತ್ತೀರಾ? ಅವರು ಸ್ಪಷ್ಟವಾಗಿ ಋಣಾತ್ಮಕವಾಗಿ ರೇಟಿಂಗ್ ಅನ್ನು ಕುಶಲತೆಯಿಂದ ಬಳಸುತ್ತಿದ್ದಾರೆ ಎನಿಸುತ್ತಿದೆ.

ಯಾವುದೇ ಬಳಕೆದಾರರು ಒಂದು ಕತೆಗೆ ರೇಟಿಂಗ್ ನೀಡಲು ನಾವು ಅನುಮತಿಸುವ ಮಾನದಂಡ ತುಂಬಾ ಸರಳವಾಗಿದೆ. ಯಾವುದೇ ಪ್ರಕಟಿತ ಕೃತಿಗೆ ಬಳಕೆದಾರರು ರೇಟಿಂಗ್ ನೀಡಬಹುದು.

ಬಳಕೆದಾರರು ತಾವು ರೇಟಿಂಗ್ ನೀಡುತ್ತಿರುವ ಕಥೆಯನ್ನು ನಿಜವಾಗಿ ಓದಿದ್ದಾರೆಯೇ ಅಥವಾ ಅವರು ನೀಡುತ್ತಿರುವ ರೇಟಿಂಗ್ ಬಗ್ಗೆ ನಿಜವಾಗಿಯೂ ಯೋಚಿಸುತ್ತಾರೆಯೇ ಎಂದು ಪರಿಶೀಲಿಸಲು ಯಾವುದೇ ಮಾರ್ಗವಿಲ್ಲ. ನಮ್ಮ ಬಳಕೆದಾರರು ಸತ್ಯವಂತರಾಗಿರಬೇಕೆಂದು ನಿರೀಕ್ಷಿಸುತ್ತೇವೆ ಮತ್ತು ಅವರು ತಾವು ಓದಿದ ಕಥೆಗಳಿಗೆ ಮಾತ್ರ ರೇಟಿಂಗ್ ನೀಡುತ್ತಾರೆ ಎಂದು ನಾವು ಭಾವಿಸುತ್ತೇವೆ.

ಯಾವುದೇ ಕೃತಿಯ ರೇಟಿಂಗ್ ತಗ್ಗಿಸುವ ಉದ್ದೇಶದಿಂದಲೇ ಕೆಲವರು ರೇಟಿಂಗ್ ನೀಡಬಹುದು.(ರೇಟಿಂಗ್ ಹೆಚ್ಚಿಸಲು ಕೂಡ ಇದು ನಡೆಯಬಹುದು). ಇಂತಹ ಕೃತ್ಯವನ್ನು ಪತ್ತೆಹಚ್ಚಲು ಮತ್ತು ತೆಗೆದುಹಾಕಲು ನಾವು ಹಲವಾರು ಮಾರ್ಗಗಳನ್ನು ಹೊಂದಿದ್ದೇವೆ: ಎಲ್ಲಾ ರೇಟಿಂಗ್'ಗಳನ್ನು ಒಟ್ಟುಗೂಡಿಸುವಾಗ ಹೀಗೆ ರೇಟಿಂಗ್ ತಗ್ಗಿಸಲು ಮಾಡುವ ಕೃತ್ಯಗಳನ್ನು ತಡೆಯಲು ಕೆಲವು ಕ್ರಮಗಳನ್ನು ಹೊಂದಿದ್ದೇವೆ.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?