ನನ್ನ ಪ್ರತಿಲಿಪಿ ಖಾತೆಯನ್ನು ಹೇಗೆ ಸುರಕ್ಷಿತಗೊಳಿಸುವುದು?

ಪ್ರತಿಲಿಪಿಯಲ್ಲಿ ಖಾತೆಯ ಸುರಕ್ಷತೆಯ ಬಗ್ಗೆ ನಾವು ಹೆಚ್ಚಿನ ಆದ್ಯತೆ ನೀಡುತ್ತೇವೆ. ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ನೀವು ಮಾಡಬಹುದಾದ ಕೆಲವು ಸುರಕ್ಷತಾ ಕ್ರಮಗಳು ಇಲ್ಲಿವೆ:

 

1. ಬಲವಾದ ಪಾಸ್‌ವರ್ಡ್'ಅನ್ನು ಬಳಸಿ. ಅಕ್ಷರಗಳು, ಸಂಖ್ಯೆಗಳು ಮತ್ತು ಚಿಹ್ನೆಗಳೊಂದಿಗೆ ಮಿಶ್ರಣ ಮಾಡಿ ಪಾಸ್ ವರ್ಡ್ ರಚಿಸಿ.

2. ಪ್ರತಿಲಿಪಿಯಲ್ಲಿ ಏನಾದರೂ ಅನುಮಾನಾಸ್ಪದವಾಗಿ ಕಂಡುಬಂದರೆ, ಸಹಾಯಕ್ಕಾಗಿ ಸಂಪರ್ಕಿಸುವ ಮೂಲಕ ಅದನ್ನು ದೃಢೀಕರಿಸಿಕೊಳ್ಳಿ.

3. ಪ್ರತಿಲಿಪಿ ವೆಬ್‌ಸೈಟ್'ಅನ್ನು ಪ್ರವೇಶಿಸುವಾಗ  https://www.pratilipi.com ಮೂಲಕ ಮಾತ್ರ ಲಾಗಿನ್ ಮಾಡಿ.

4. ನಿಮ್ಮ ಇಮೇಲ್ ವಿಳಾಸ ಬಳಸಿ ಯಾರಾದರೂ ಪ್ರತಿಲಿಪಿ ಖಾತೆಯನ್ನು ರಚಿಸಿದ್ದರೆ, ದಯವಿಟ್ಟು ಆ ಪ್ರೊಫೈಲ್'ಅನ್ನು ವರದಿ ಮಾಡಿ. ನಾವು ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತೇವೆ.

 

ದಯವಿಟ್ಟು ಗಮನಿಸಿ: ಪ್ರತಿಲಿಪಿಯಲ್ಲಿ ನೀವು ಅನುಮಾನಾಸ್ಪದ ಚಟುವಟಿಕೆಗಳನ್ನು ನೋಡಿದ್ದರೆ ಅಥವಾ ಸಂವಹನ ನಡೆಸಿದ್ದರೆ ನಿಮ್ಮ ಪಾಸ್‌ವರ್ಡ್'ಅನ್ನು ತಕ್ಷಣವೇ ಬದಲಾಯಿಸಲು ಮರೆಯದಿರಿ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?