ನಿಮ್ಮ ಖಾತೆಗೆ ಲಿಂಕ್ ಆಗಿರುವ ಇಮೇಲ್ ವಿಳಾಸ ಬಹಳ ಮುಖ್ಯವಾಗಿದೆ. ಇದರಿಂದ ನೀವು ಈ ಕೆಳಗಿನ ಪ್ರಯೋಜನಗಳನ್ನು ಪಡೆಯಬಹುದು:
-
ನಿಮ್ಮ ಪಾಸ್ ವರ್ಡ್ ಮರುಹೊಂದಿಸಬಹುದು
-
ನಿಮ್ಮ ಖಾತೆಯನ್ನು ಪರಿಶೀಲಿಸಬಹುದು
-
ಪ್ರತಿಲಿಪಿಯಿಂದ ಇಮೇಲ್ ಅಧಿಸೂಚನೆಗಳನ್ನು ಪಡೆಯಬಹುದು
ಪಾಸ್ವರ್ಡ್ ತಿಳಿದಿದ್ದರೆ ಮತ್ತು ಈಮೇಲ್ ವಿಳಾಸ ಸರಿಯಾಗಿದ್ದರೆ ನೀವು ಯಾವುದೇ ಸಮಯದಲ್ಲಿ ನಿಮ್ಮ ಖಾತೆಗೆ ಲಿಂಕ್ ಆಗಿರುವ ಇಮೇಲ್ ವಿಳಾಸವನ್ನು ಬದಲಾಯಿಸಬಹುದು.
ನೀವು ಈಮೇಲ್ ಬದಲಾಯಿಸಿದರೆ, ಇಮೇಲ್ ವಿಳಾಸವನ್ನು ಪರಿಶೀಲಿಸಬೇಕಾಗುತ್ತದೆ. ಬದಲಾವಣೆಯನ್ನು ಮಾಡಿದ ನಂತರ ನಿಮ್ಮ ಹೊಸ ಇಮೇಲ್‌ಗೆ ಪರಿಶೀಲನಾ ಇಮೇಲ್'ಅನ್ನು ಕಳುಹಿಸಲಾಗುತ್ತದೆ. ನಿಮಗೆ ಯಾವುದೇ ಸಂದೇಹವಿದ್ದರೆ, ದಯವಿಟ್ಟು ಈ ಮಾರ್ಗದರ್ಶಿಗೆ ಭೇಟಿ ನೀಡಿ: ನಿಮ್ಮ ಇಮೇಲ್'ಅನ್ನು ಪರಿಶೀಲಿಸಲಾಗುವುದು
ಆಂಡ್ರಾಯ್ಡ್ ಮೂಲಕ:
-
ನಿಮ್ಮ ಹೋಮ್ ಪೇಜ್'ನ ಬಲ ಮೇಲ್ಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ
-
ನಿಮ್ಮ ಪ್ರೊಫೈಲ್‌ಗೆ ಹೋಗಿ
-
ಬಲ ಮೇಲ್ಭಾಗದಲ್ಲಿರುವ ಸೆಟ್ಟಿಂಗ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
-
ಖಾತೆ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿ
-
ಇಮೇಲ್ ಬದಲಿಸಿ ಮೇಲೆ ಕ್ಲಿಕ್ ಮಾಡಿ
-
ನಿಮ್ಮ ಹೊಸ ಇಮೇಲ್'ಅನ್ನು ನಮೂದಿಸಿ
-
ಬದಲಾಯಿಸಿ ಮೇಲೆ ಕ್ಲಿಕ್ ಮಾಡಿ
ಲಿಂಕ್ ಮಾಡಲಾದ ಇಮೇಲ್‌ಗೆ ಪ್ರವೇಶವನ್ನು ಮರೆತಿದ್ದೀರಾ ಅಥವಾ ಕಳೆದುಕೊಂಡಿದ್ದೀರಾ?
ಪ್ರತಿಲಿಪಿ ಖಾತೆಗೆ ಲಿಂಕ್ ಆಗಿರುವ ಇಮೇಲ್ ವಿಳಾಸವನ್ನು ನೀವು ಮರೆತಿದ್ದರೆ ಅಥವಾ ಪ್ರವೇಶವನ್ನು ಕಳೆದುಕೊಂಡಿದ್ದರೆ, ದಯವಿಟ್ಟು ಈ ಮಾರ್ಗದರ್ಶಿಯನ್ನು ಓದಿ: ಇಮೇಲ್ ಮರೆತುಹೋಗಿದೆ
ಒಂದೊಮ್ಮೆ ನಿಮ್ಮ ಸಮಸ್ಯೆ ಪರಿಹಾರ ಆಗದಿದ್ದಲ್ಲಿ ಸಹಾಯಕ್ಕಾಗಿ ಮನವಿಯನ್ನು ಸಲ್ಲಿಸಿ. ನಿಮ್ಮ ಖಾತೆಗೆ ಲಿಂಕ್ ಆಗಿರುವ ಈಮೇಲ್ ಮೂಲಕವೇ ನಮಗೆ ಸಹಾಯಕ್ಕಾಗಿ ಮನವಿ ಸಲ್ಲಿಸುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.