ವೆಬ್‌ಸೈಟ್/ಅಪ್ಲಿಕೇಶನ್'ನಲ್ಲಿ ಪ್ರಕಟವಾಗುವ ಕೃತಿಗಳಿಗೆ ಹಕ್ಕುಸ್ವಾಮ್ಯ ಅನ್ವಯಿಸುವಿಕೆ
-
ಬಳಕೆಯ ನಿಯಮಗಳ ಪ್ರಕಾರ, ವೆಬ್‌ಸೈಟ್/ಅಪ್ಲಿಕೇಶನ್'ನಲ್ಲಿ ಕೃತಿಗಳನ್ನು ಪ್ರಕಟಿಸುವ ಬಳಕೆದಾರರಿಂದ, ಪ್ರಕಟಿಸುವ ಮತ್ತು ಪ್ರದರ್ಶಿಸುವ ಸೀಮಿತ ಹಕ್ಕನ್ನು ಮಾತ್ರ ಕಂಪನಿ ಹೊಂದಿರುತ್ತದೆ. ಕಂಪನಿಯ ಪ್ರಯೋಜನಕ್ಕಾಗಿ ಪ್ರಕಟಿತ ಕೃತಿಗಳಲ್ಲಿ ಬೇರೆ ಯಾವುದೇ ಹಕ್ಕುಸ್ವಾಮ್ಯವನ್ನು ಹೊಂದಿರುವುದಿಲ್ಲ.
-
ಹೆಚ್ಚುವರಿಯಾಗಿ, ಬಳಕೆಯ ನಿಯಮಗಳಲ್ಲಿ ಹೇಳಿದಂತೆ, ಪ್ರಕಟಿತ ಕೃತಿಗಳಿಗೆ ಸಂಬಂಧಿಸಿದಂತೆ ಕಂಪನಿಯು ಮಧ್ಯವರ್ತಿಯ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಕಂಪನಿಯ ಪಾತ್ರವು ಬಳಕೆದಾರರಿಂದ ಪ್ರಕಟಿತ ಕೃತಿಗಳನ್ನು ಸ್ವೀಕರಿಸಲು/ ಶೇಖರಿಸಿಡಲು/ ರವಾನೆ ಮಾಡಲು ಸೀಮಿತವಾಗಿದೆ. ಮತ್ತು ವೆಬ್‌ಸೈಟ್/ ಅಪ್ಲಿಕೇಶನ್'ನಲ್ಲಿ ಪ್ರಕಟಿತ ಕೃತಿಗಳನ್ನು ಮಾರ್ಪಡಿಸಲು, ಓದುಗರನ್ನು ಆಯ್ಕೆ ಮಾಡಲು ಹಕ್ಕು ವಿಸ್ತರಣೆಯಾಗುವುದಿಲ್ಲ. ಇದರರ್ಥ ಕಂಪನಿಯು ಯಾವುದೇ ಪ್ರಕಟಿತ ಕೃತಿಗಳಿಗೆ ನೇರವಾಗಿ ಜವಾಬ್ದಾರನಾಗಿರುವುದಿಲ್ಲ. ಮತ್ತು ಕಾನೂನು ಮತ್ತು ಆಂತರಿಕ ಕಾರ್ಯವಿಧಾನಗಳಿಗೆ ಅನುಸಾರವಾಗಿ ಸೂಕ್ತವಲ್ಲದ ಕೃತಿಗಳನ್ನು ಮಾತ್ರ ತೆಗೆದುಹಾಕಲಾಗುತ್ತದೆ.