ಪ್ರಕಟವಾಗುವ ಕೃತಿಗಳು ಭಾರತೀಯ ದಂಡ ಸಂಹಿತೆ 1860 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಅಂತಹ ಕಾನೂನುಗಳ ಅಡಿಯಲ್ಲಿ ಮಾಡಲಾದ ಎಲ್ಲಾ ನಿಯಮಗಳು ಮತ್ತು ತಿದ್ದುಪಡಿಗಳನ್ನು ಒಳಗೊಂಡಂತೆ ಯಾವುದೇ ಕಾನೂನುಗಳನ್ನು/ನಿಯಮಗಳನ್ನು ಉಲ್ಲಂಘಿಸುವಂತಿಲ್ಲ.
ಅದರಂತೆ ಪ್ರಕಟವಾಗುವ ಕೃತಿಗಳು:
-
ಯಾವುದು ಈ ಕೆಳಗಿನ ಸಂಗತಿಗಳಿಗೆ ಧಕ್ಕೆಯುಂಟು ಮಾಡುತ್ತವೆಯೋ ಅವುಗಳನ್ನು ಪ್ರಕಟಿಸುವಂತಿಲ್ಲ.
-
ಭಾರತದ ಏಕತೆ, ಸಮಗ್ರತೆ, ರಕ್ಷಣೆ, ಭದ್ರತೆ ಅಥವಾ ಸಾರ್ವಭೌಮತ್ವ,
-
ವಿದೇಶಗಳೊಂದಿಗಿನ ಸ್ನೇಹ ಸಂಬಂಧಗಳು
-
ಸಾರ್ವಜನಿಕ ಹಿತಾಸಕ್ತಿ.
-
ಯಾವುದು ಈ ಕೆಳಗಿನ ಸಂಗತಿಗಳನ್ನು ಒಳಗೊಂಡಿರುತ್ತದೆಯೋ ಅಂಥವುಗಳನ್ನು ಪ್ರಕಟಿಸುವಂತಿಲ್ಲ.
-
ಬೇರೆ ಯಾವುದೇ ರಾಷ್ಟ್ರಕ್ಕೆ ಅವಮಾನವಾಗುವಂತಹ,
-
ಭಯೋತ್ಪಾದನೆ ಸೇರಿದಂತೆ ಯಾವುದೇ ಅಪರಾಧಗಳನ್ನು ಪ್ರಚೋದಿಸುವಂತಹ,
-
ಅಪರಾಧಗಳ ತನಿಖೆಗೆ ತಡೆಯೊಡ್ಡುವಂತಹ ಕೃತಿಗಳು.
-
ಮನಿ ಲಾಂಡರಿಂಗ್ ಅಥವಾ ಜೂಜಾಟ ಅಥವಾ ಅಕ್ರಮ/ಮಾದಕ ವಸ್ತುಗಳ ಸೇವನೆಗೆ ಸಂಬಂಧಿಸಿದ ಅಥವಾ ಅಂಥವುಗಳನ್ನು ಪ್ರೋತ್ಸಾಹಿಸುವಂತಿಲ್ಲ.
-
ಮೂಲ ಮಾಹಿತಿಯ ಬಗ್ಗೆ ತಪ್ಪಾದ ಅರ್ಥ ಕಲ್ಪಿಸುವುದು ಅಥವಾ ದಾರಿ ತಪ್ಪಿಸುವಂತಿಲ್ಲ.
-
ಮಾನಹಾನಿಕರವಾಗಿರುವಂತಿಲ್ಲ.
-
ಆರ್ಥಿಕ ಲಾಭಕ್ಕಾಗಿ ವ್ಯಕ್ತಿ, ಘಟಕ ಅಥವಾ ಏಜೆನ್ಸಿಯನ್ನು ದಾರಿತಪ್ಪಿಸುವಂತಿಲ್ಲ ಅಥವಾ ಯಾವುದೇ ವ್ಯಕ್ತಿಗೆ ಕಿರುಕುಳ ನೀಡುವ ಉದ್ದೇಶ ಅಥವಾ ಹಾನಿ ಮಾಡುವ ಉದ್ದೇಶ ಹೊಂದಿರುವಂತಿಲ್ಲ.
-
ಯಾವುದೇ ಕಂಪ್ಯೂಟರ್ ಸಂಪನ್ಮೂಲದ ಕಾರ್ಯವನ್ನು ಮಿತಿಗೊಳಿಸಲು,ಫೈಲ್ ಅಥವಾ ಪ್ರೋಗ್ರಾಂ ಅನ್ನು ಅಡ್ಡಿಪಡಿಸಲು, ನಾಶಪಡಿಸಲು ವಿನ್ಯಾಸಗೊಳಿಸಿದ ಸಾಫ್ಟ್‌ವೇರ್ ವೈರಸ್ ಅಥವಾ ಯಾವುದೇ ಇತರ ಕಂಪ್ಯೂಟರ್ ಕೋಡ್ ಆಗಿರುವಂತಿಲ್ಲ.