ಪ್ರತಿಲಿಪಿಯಲ್ಲಿ ಯಾವುದೇ ಕಾರ್ಯಕ್ರಮಕ್ಕೆ ನಾನು ಹೇಗೆ ಚಂದಾದಾರರಾಗಬಹುದು?

ಸೂಪರ್ ಫ್ಯಾನ್ ಸಬ್ಸ್ಕ್ರಿಪ್ಷನ್ ಸೌಲಭ್ಯವನ್ನು ಹೊಂದುವ ವಿಧಾನ : 

 

ಸೂಪರ್‌ಫ್ಯಾನ್ ಸಬ್ಸ್ಕ್ರಿಪ್ಷನ್ ಗೆ ಅರ್ಹರಾಗಿರುವ ಪ್ರತಿಯೊಬ್ಬ ಲೇಖಕರು ತಮ್ಮ ಪ್ರೊಫೈಲ್ ಚಿತ್ರದ ಮೇಲೆ ಗೋಲ್ಡನ್ ಬ್ಯಾಡ್ಜ್ ಅನ್ನು ಹೊಂದಿರುತ್ತಾರೆ. ನೀವು ಈ ಲೇಖಕರ ಪ್ರೊಫೈಲ್‌ಗೆ ಭೇಟಿ ನೀಡುವ ಮೂಲಕ ಚಂದಾದಾರರಾಗಬಹುದು - ಇದಕ್ಕೆ ಅವರ ಪ್ರೊಫೈಲ್ ಪುಟದಲ್ಲಿ ತೋರಿಸಿರುವ ಸಬ್ಸ್ಕ್ರಿಪ್ಷನ್ ಬಟನ್ ಒತ್ತಿರಿ. ನಮ್ಮ ಮಾಸಿಕ, ಅರ್ಧ- ವಾರ್ಷಿಕ ಅಥವಾ ವಾರ್ಷಿಕ ಚಂದಾದಾರಿಕೆ ಯೋಜನೆಗಳಿಂದ ನೀವು ಯಾವುದಾದರೊಂದನ್ನು ಆಯ್ಕೆ ಮಾಡಿ ಲೇಖಕರಿಗೆ ಚಂದಾದಾರರಾಗಬಹುದು. 

 

ಪ್ರತಿಲಿಪಿ ಪ್ರೀಮಿಯಂ ಸೌಲಭ್ಯವನ್ನು ಹೊಂದುವ ವಿಧಾನ

ಪ್ರೀಮಿಯಂ ಕಥೆಗಳು ಪ್ರತಿಲಿಪಿಯ ಸಂಪಾದಕೀಯ ಮಂಡಳಿಯಿಂದ ಆರಿಸಿದ ಕಥೆಗಳಾಗಿವೆ. ಪ್ರತಿಲಿಪಿಯ ಮುಖಪುಟದಲ್ಲಿಯೇ ಪ್ರೀಮಿಯಂ ವಿಜೆಟ್ ಅಡಿಯಲ್ಲಿ ಇದನ್ನು ಕಾಣಬಹುದು. ನೀವು ಸಕ್ರಿಯ ಚಂದಾದಾರಿಕೆಗಳ ಪುಟಕ್ಕೆ ಭೇಟಿ ನೀಡುವ ಮೂಲಕ ಅಥವಾ ನಮ್ಮ ಹೋಮ್ ಸ್ಕ್ರೀನ್ ವಿಜೆಟ್‌ನಿಂದ ಪ್ರೀಮಿಯಂ ವಿಷಯವನ್ನು ತೆರೆಯುವ ಮೂಲಕ ಪ್ರೀಮಿಯಂ ಪ್ರೋಗ್ರಾಂಗೆ ಚಂದಾದಾರರಾಗಬಹುದು.

ನೀವು ಮಾಸಿಕ, ಅರ್ಧ-ವಾರ್ಷಿಕ ಅಥವಾ ವಾರ್ಷಿಕ ಚಂದಾದಾರಿಕೆ ಯೋಜನೆಗಳಿಂದ ಸೂಕ್ತವೆನಿಸಿದ ಯೋಜನೆ ಆಯ್ಕೆ ಮಾಡಿ ಚಂದಾದಾರರಾಗಬಹುದು. 

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?