ಪ್ರಕಟಿತ ಕಥೆಯ ಅಧ್ಯಾಯವನ್ನು ನಾನು ಹೇಗೆ ಎಡಿಟ್ ಮಾಡಬಹುದು ?

ನಿಮ್ಮ ಬರಹ ಡ್ರಾಫ್ಟ್'ನಲ್ಲಿದ್ದರೂ ಅಥವಾ ಪ್ರಕಟಿತವಾಗಿದ್ದರೂ ನೀವು ಅವುಗಳನ್ನು ಎಡಿಟ್ ಮಾಡಬಹುದು. ಡ್ರಾಫ್ಟ್'ನಲ್ಲಿನ ಬರಹಗಳು ನೀವು ಎಡಿಟ್ ಮಾಡಿದ ತಕ್ಷಣ ಸ್ವಯಂಚಾಲಿತವಾಗಿ ಸಂರಕ್ಷಿಸಲ್ಪಡುತ್ತದೆ.

 

ಆಯ್ಕೆ 1: ಬರಹದ ಪುಟದ ಮೂಲಕ

 

  1. ಪ್ರತಿಲಿಪಿ ಹೋಂ ಪೇಜ್'ನ ಕೆಳಭಾಗದಲ್ಲಿ ಕಾಣುವ ಬರೆಯಿರಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

  2. ನೀವು ಎಡಿಟ್ ಮಾಡಲು ಇಚ್ಛಿಸುವ ಬರಹದ ಮೇಲೆ ಕ್ಲಿಕ್ ಮಾಡಿ

 

ಆಯ್ಕೆ 2: ಪ್ರೊಫೈಲ್ ಮೂಲಕ

 

  1. ಪ್ರತಿಲಿಪಿ ಹೋಂ ಪೇಜ್'ನ ಬಲ ಮೇಲ್ಭಾಗದಲ್ಲಿ ಕಾಣಿಸುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿ

  2. ನೀವು ಎಡಿಟ್ ಮಾಡಲು ಇಚ್ಛಿಸುವ ಬರಹದ ಮೇಲೆ ಕ್ಲಿಕ್ ಮಾಡಿ

  3. ಎಡಿಟ್ ಮಾಡಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

  4. ನೀವು ಎಡಿಟ್ ಮಾಡಲು ಇಚ್ಛಿಸುವ ಅಧ್ಯಾಯದ ಮೇಲೆ ಕ್ಲಿಕ್ ಮಾಡಿ

 

ಒಮ್ಮೆ ನೀವು ಬರಹಗಳನ್ನು ಎಡಿಟ್ ಮಾಡಿದ ಮೇಲೆ ಅವುಗಳ ಪ್ರೀವ್ಯೂ ನೋಡಬಹುದು, ಸಂರಕ್ಷಿಸಬಹುದು ಅಥವಾ ಪ್ರಕಟಿಸಬಹುದು.

 

  • ಬರಹವನ್ನು ಪ್ರಕಟಿಸಲು

    • ಪ್ರಕಟಿಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ

 

  • ಬರಹವನ್ನು ಸಂರಕ್ಷಿಸಲು

    • ಬಲ ಮೇಲ್ಭಾಗದಲ್ಲಿ ಕಾಣಿಸುವ ಸೇವ್ ಚಿತ್ರದ ಮೇಲೆ ಕ್ಲಿಕ್ ಮಾಡಿ

 

  • ಪ್ರೀವ್ಯೂ ಆಯ್ಕೆಗಾಗಿ

    • ಬಲ ಮೇಲ್ಭಾಗದಲ್ಲಿ ಕಾಣಿಸುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಿ

    • ಪ್ರೀವ್ಯೂ ಆಯ್ಕೆ ಮಾಡಿ

    • ಪ್ರೀವ್ಯೂ'ನಿಂದ ಹೊರಬರಲು ಬ್ಯಾಕ್ ಬಟನ್ ಮೇಲೆ ಕ್ಲಿಕ್ ಮಾಡಿ

 

ನಿಮ್ಮ ಬರಹದ ಫಾರ್ಮ್ಯಾಟ್ ಬದಲಿಸಲು

 

ಪ್ರತಿಯೊಂದು ಬರಹಗಳೂ ವಿಭಿನ್ನವಾಗಿರುತ್ತವೆ. ನಿಮ್ಮ ಬರಹದ ಅಕ್ಷರ ವಿನ್ಯಾಸ, ಗಾತ್ರ ಮುಂತಾದವುಗಳನ್ನು ಬದಲಿಸುವ ಮೂಲಕ ನೀವು ಇತರರಿಗಿಂತ ಭಿನ್ನವಾಗಿರಬಹುದು.

 

ಬರಹದ ಪುಟದಲ್ಲಿ:

 

  • ನಿಮ್ಮ ಬರಹವನ್ನು ಬೋಲ್ಡ್, ಇಟಾಲಿಕ್, ಅಂಡರ್ಲೈನ್'ಗಳಲ್ಲಿ ಬರೆಯಬಹುದು

  • ಎಡ, ಬಲ, ಮಧ್ಯದ ಅಲೈನ್ಮೆಂಟ್ ಜೋಡಿಸಬಹುದು

  • ಬರಹದ ಮಧ್ಯದಲ್ಲಿ ಚಿತ್ರಗಳನ್ನು ಸೇರಿಸಬಹುದು

 

ಬರಹದ ವಿವರಗಳನ್ನು ನೀಡುವುದು

ಬರಹದ ವಿವರಗಳು ನಿಮ್ಮ ಬರಹ ಹೆಚ್ಚು ಮುನ್ನೆಲೆಗೆ ಬರಲು ಸಹಾಯ ಮಾಡುತ್ತದೆ.



  • ಕವರ್ ಚಿತ್ರ

  • ಶೀರ್ಷಿಕೆ

  • ಸಾರಾಂಶ

  • ವಿಧ

  • ಪ್ರಭೇದ

  • ಬರಹದ ಹಂತ(ಮುಂದುವರೆಯುತ್ತಿದೆ ಅಥವಾ ಮುಗಿದಿದೆ)

 

ಇವುಗಳನ್ನು ನೀವು ಯಾವುದೇ ಸಮಯದಲ್ಲಿ ಬದಲಾಯಿಸಬಹುದು.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?