ನಾನು ರೀಡಿಂಗ್ ಚಾಲೆಂಜ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತೇನೆ.

1.ರೀಡಿಂಗ್ ಚಾಲೆಂಜ್ ಎಂದರೇನು ?

ಪ್ರತಿನಿತ್ಯ ಕನಿಷ್ಟ ಒಂದಾದರೂ ಬರಹವನ್ನು ಸಂಪೂರ್ಣವಾಗಿ ಆನ್ಲೈನ್ ನಲ್ಲಿ ಓದುವ ಮೂಲಕ ರೀಡಿಂಗ್ ಚಾಲೆಂಜ್ ಸ್ವೀಕರಿಸಿ  ನಾಣ್ಯಗಳನ್ನು ಗೆಲ್ಲಬಹುದು.

2. ರೀಡಿಂಗ್ ಚಾಲೆಂಜ್ ಪ್ರಾರಂಭಿಸುವುದು ಹೇಗೆ ? 

ರೀಡಿಂಗ್ ಚಾಲೆಂಜ್ ನಲ್ಲಿ ಭಾಗವಹಿಸಲು ಮೊದಲು ನೀವು ರೀಡಿಂಗ್ ಚಾಲೆಂಜ್ ಸ್ವೀಕರಿಸಬೇಕು. ಕೆಳಗಿನ ಕ್ರಮಗಳನ್ನು ಅನುಸರಿಸುವ ಮೂಲಕ ರೀಡಿಂಗ್ ಚಾಲೆಂಜ್  ಸ್ವೀಕರಿಸಬಹುದು. 

  • ನಿಮ್ಮ ಪ್ರೊಫೈಲ್ ಗೆ ಭೇಟಿ ನೀಡಿ 

  • ರೀಡಿಂಗ್ ಚಾಲೆಂಜ್ ಮೇಲೆ ಕ್ಲಿಕ್ ಮಾಡಿ 

  • ರೀಡಿಂಗ್ ಚಾಲೆಂಜ್ ಸ್ವೀಕರಿಸಿ ಮೇಲೆ ಕ್ಲಿಕ್ ಮಾಡಿ

3. ರೀಡಿಂಗ್  ಚಾಲೆಂಜ್ ನಲ್ಲಿ ನಾಣ್ಯಗಳನ್ನು ಗೆಲ್ಲಲು ಎಷ್ಟು ದಿನಗಳ ಕಾಲ ನಾನು ಓದಬೇಕು ?

ಎರಡು ರೀತಿಯ ಚಾಲೆಂಜ್ ಗಳಿವೆ. 

೧. ೭ ದಿನಗಳ ಚಾಲೆಂಜ್ - ನೀವು ಪ್ರತಿನಿತ್ಯ ಕನಿಷ್ಟ ಒಂದಾದರೂ ಬರಹವನ್ನು ಆನ್ಲೈನ್ ನಲ್ಲಿಸಂಪೂರ್ಣವಾಗಿ ಸತತ ಏಳು ದಿನಗಳ ಕಾಲ ಪ್ರತಿಲಿಪಿ ಅಪ್ಲಿಕೇಶನ್ ಅಲ್ಲಿ ಓದಬೇಕು. ಈ ಚಾಲೆಂಜಿನಲ್ಲಿ ನೀವು ವಿಜೇತರಾದಲ್ಲಿ ೫ ನಾಣ್ಯಗಳು ನಿಮ್ಮ ಪ್ರತಿಲಿಪಿ ಖಾತೆಗೆ ಜಮೆಯಾಗುತ್ತವೆ.   

೨. ೨೧ ದಿನಗಳ ಚಾಲೆಂಜ್ - ನೀವು ಪ್ರತಿನಿತ್ಯ ಕನಿಷ್ಟ ಒಂದಾದರೂ ಬರಹವನ್ನು ಸಂಪೂರ್ಣವಾಗಿ ಆನ್ಲೈನ್ ನಲ್ಲಿ ೨೧  ದಿನಗಳ ಕಾಲ ಸತತವಾಗಿ ಓದಿ ಈ ಚಾಲೆಂಜ್ ನಲ್ಲಿ ವಿಜೇತರಾಗಬಹುದು. ಈ ಚಾಲೆಂಜಿನಲ್ಲಿ ವಿಜೇತರಾದಲ್ಲಿ ೨೫ ನಾಣ್ಯಗಳು ನಿಮ್ಮ ಪ್ರತಿಲಿಪಿ ಖಾತೆಗೆ ಜಮೆ ಆಗುತ್ತವೆ. ಇದರಲ್ಲಿ ಮೊದಲ ೭ ದಿನ ಓದಿದ ಬಳಿಕ  ೫ ನಾಣ್ಯಗಳೂ, ಮತ್ತು ೨೧ ದಿನಗಳು ಮುಗಿದ ಬಳಿಕ ಉಳಿದ ೨೦ ನಾಣ್ಯಗಳೂ ನಿಮ್ಮ ಪ್ರತಿಲಿಪಿ ಖಾತೆಗೆ ಜಮೆಯಾಗುತ್ತವೆ. 

ಒಂದು ರೀಡಿಂಗ್ ಚಾಲೆಂಜ್ ಮುಗಿಸಿದ ಮರುದಿವಸವೇ ಇನ್ನೊಂದು ರೀಡಿಂಗ್ ಚಾಲೆಂಜ್ ಪ್ರಾರಂಭಿಸಬಹುದು. 

4. ನಾನು ಈ ಎರಡೂ ಚಾಲೆಂಜ್ ಗಳಲ್ಲಿ ಯಾವುದಾದರೊಂದು ದಿನ ಓದುವುದು ನಿಲ್ಲಿಸಿದರೆ ಏನಾಗುತ್ತದೆ ?

ಈ ಸಂದರ್ಭದಲ್ಲಿ - ನೀವು ರೀಡಿಂಗ್ ಚಾಲೆಂಜ್ ನಿಂದ ಹೊರಗುಳಿಯುತ್ತೀರಿ. ಮತ್ತು ಪುನಃ ಚಾಲೆಂಜ್ ಮೊದಲ ದಿನದಿಂದ ಪ್ರಾರಂಭಿಸಬೇಕಾಗುತ್ತದೆ. ಇದಕ್ಕೆ ಪುನಃ ನಿಮ್ಮ ಪ್ರೊಫೈಲ್ ಗೆ ಹೋಗಿ ರೀಡಿಂಗ್ ಚಾಲೆಂಜ್ ಶುರು ಮಾಡಬೇಕು. 

5. ನಾನು ೭ ದಿನದ ರೀಡಿಂಗ್ ಚಾಲೆಂಜ್ ಮುಗಿಸಿದ್ದೇನೆ. ಆ ಬಳಿಕ ಕೆಲವು ದಿನ ಓದಿಲ್ಲ. ಹೀಗಿರುವಾಗ ೨೧ ದಿನಗಳ ರೀಡಿಂಗ್ ಚಾಲೆಂಜ್ ಗೆ ನಾನು ಅರ್ಹನೇ ?

ನೀವು ಈ ಸಂದರ್ಭದಲ್ಲಿ ೨೧ ದಿನಗಳ ಚಾಲೆಂಜ್ ನಿಂದ ಹೊರಗುಳಿಯುತ್ತೀರಿ. ಹಾಗಿದ್ದರೂ ೭ ದಿನಗಳ ಚಾಲೆಂಜಿನ ವಿಜೇತರಾಗಿರುವ ಕಾರಣ ನಿಮ್ಮ ಪ್ರತಿಲಿಪಿ ಖಾತೆಗೆ ೫ ನಾಣ್ಯಗಳು ಲಭ್ಯವಿರುತ್ತವೆ. ರೀಡಿಂಗ್ ಚಾಲೆಂಜ್ ವಿಭಾಗಕ್ಕೆ ಹೋಗಿ ಅವುಗಳನ್ನು ಪಡೆದುಕೊಳ್ಳಬಹುದು. ಮತ್ತು ಮೊದಲಿನಿಂದ ಇನ್ನೊಂದು ಚಾಲೆಂಜನ್ನು ಪ್ರಾರಂಭಿಸಬಹುದು. 

6. ಇದು ಪ್ರತಿಲಿಪಿ ವೆಬ್ಸೈಟ್ ನಲ್ಲಿ ಓದಿದರೆ ಪರಿಗಣಿಸಲ್ಪಡುತ್ತದೆಯೇ ?

ಇಲ್ಲ, ರೀಡಿಂಗ್ ಚಾಲೆಂಜನ್ನು ನಾವು ಸದ್ಯಕ್ಕೆ ಪ್ರತಿಲಿಪಿ ಆ್ಯoಡ್ರಾಯ್ಡ್ ಅಪ್ಲಿಕೇಶನ್ ಅಲ್ಲಿ ಮಾತ್ರ ನೀಡುತ್ತಿದ್ದು, ವೆಬ್ಸೈಟ್ ಮತ್ತು IOS ನಲ್ಲಿ ಈ ಸೌಲಭ್ಯ ಇರುವುದಿಲ್ಲ. 

7. ನಾನು ಒಮ್ಮೆ ಈ ರೀಡಿಂಗ್ ಚಾಲೆಂಜನ್ನು ಪೂರ್ಣಗೊಳಿಸಿದ ಬಳಿಕ ಮತ್ತೊಮ್ಮೆ ತೆಗೆದುಕೊಳ್ಳಬಹುದೇ ?

ತೆಗೆದುಕೊಳ್ಳಬಹುದು, ಒಂದು ರೀಡಿಂಗ್ ಚಾಲೆಂಜ್ ಮುಗಿದ ಬಳಿಕ ಇನ್ನೊಂದು  ರೀಡಿಂಗ್ ಚಾಲೆಂಜನ್ನು ತೆಗೆದುಕೊಳ್ಳಬಹುದು. ಮತ್ತಿದನ್ನು ಎಷ್ಟು ಸಲ ಬೇಕು ಅಷ್ಟು ಸಲ ತೆಗೆದುಕೊಳ್ಳಬಹುದು. ಆದರೆ ಪ್ರತಿ ಸಲ ಪ್ರಾರಂಭಿಸುವಾಗಲೂ ನೀವು ನಿಮ್ಮ ಪ್ರೊಫೈಲ್ ನ ರೀಡಿಂಗ್ ಚಾಲೆಂಜ್ ಪುಟಕ್ಕೆ ಹೋಗಿ ಚಾಲೆಂಜ್ ಸ್ವೀಕರಿಸಬೇಕಾಗುತ್ತದೆ. 

8. ನಾನು  ರೀಡಿಂಗ್ ಚಾಲೆಂಜ್ ನಲ್ಲಿ ಗಳಿಸಿದ ನಾಣ್ಯಗಳನ್ನು ಎಲ್ಲಿನೋಡಬಹುದು ? 

ನೀವು ರೀಡಿಂಗ್ ಚಾಲೆಂಜ್ ನಲ್ಲಿ ಭಾಗವಹಿಸಿ ೭ ಮತ್ತು ೨೧ ದಿವಸಗಳ ಕಾಲ ಸತತವಾಗಿ ಓದಿ ಗೆದ್ದ ನಾಣ್ಯಗಳನ್ನು ರೀಡಿಂಗ್ ಚಾಲೆಂಜ್ ವಿಭಾಗಕ್ಕೆ ಹೋಗಿ ಪಡೆದುಕೊಳ್ಳಬೇಕಾಗುತ್ತದೆ. ಬಳಿಕ ಇವು ನಿಮ್ಮ ವಾಲೆಟ್ ಗೆ ಜಮೆಯಾಗುತ್ತವೆ. ನಿಮ್ಮ ಖಾತೆಯ ‘ನನ್ನ ನಾಣ್ಯಗಳು’ ವಿಭಾಗದಲ್ಲಿ ಕಾಣಿಸುತ್ತವೆ. ಜೊತೆಗೆ, ‘ನನ್ನ ನಾಣ್ಯಗಳು’ ವಿಭಾಗದಲ್ಲಿ ‘ವಹಿವಾಟಿನ ವಿವರ ನೋಡಿರಿ’ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಈವರೆಗೆ ಗಳಿಸಿದ/ವಿಜೇತರಾದ ನಾಣ್ಯಗಳ ವಿವರಗಳನ್ನು ನೋಡಬಹುದು.   

9. ನಾಣ್ಯಗಳನ್ನು ಪಡೆದುಕೊಳ್ಳುವುದು ಹೇಗೆ ?

  • ನಿಮ್ಮ ಪ್ರೊಫೈಲ್ ಗೆ ಹೋಗಿ 

  • ರೀಡಿಂಗ್ ಚಾಲೆಂಜ್ ಮೇಲೆ ಕ್ಲಿಕ್ ಮಾಡಿ 

  • ನಾಣ್ಯಗಳನ್ನು ಪಡೆದುಕೊಳ್ಳಿ ಮೇಲೆ ಕ್ಲಿಕ್ ಮಾಡಿ.

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?