ನಮ್ಮ ವಿಷಯ ಮಾರ್ಗಸೂಚಿಗಳ ಅನುಸಾರವಾಗಿ, ಮತ್ತು (i) ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಪ್ರಕಾರ ಅನ್ವಯವಾಗುವ ವಿವಿಧ ಕಾನೂನುಗಳಿಗೆ ಸಂಬಂಧಿತ ತಿದ್ದುಪಡಿಗಳು ಮತ್ತು ಮಾಹಿತಿ ತಂತ್ರಜ್ಞಾನ 2021 ಕಾಯ್ದೆಯ ಅನುಗುಣವಾಗಿ ಹೊರಡಿಸಲಾದ ನಿಯಮಗಳು ( ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ಮತ್ತು (ii) ಹಕ್ಕುಸ್ವಾಮ್ಯ ಕಾಯಿದೆ 1957, ಅದರ ಸಂಬಂಧಿತ ತಿದ್ದುಪಡಿಗಳು ಮತ್ತು ಅದರ ಅನುಸಾರವಾಗಿ ಹೊರಡಿಸಲಾದ ನಿಯಮಗಳ ಪ್ರಕಾರವಾಗಿ, ಜವಾಬ್ದಾರಿಯುತ ಮಧ್ಯವರ್ತಿಗಳಾದ ನಾವು ನಮ್ಮ ವೆಬ್‌ಸೈಟ್/ಅಪ್ಲಿಕೇಶನ್‌ನಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆ ಮತ್ತು ಕೃತಿಚೌರ್ಯದ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಬದ್ಧರಾಗಿದ್ದೇವೆ.
ಹಕ್ಕುಸ್ವಾಮ್ಯ - ಪರಿಚಯ
-
ಹಕ್ಕುಸ್ವಾಮ್ಯವು ಕಾನೂನಿನಿಂದ ಮಾನ್ಯತೆ ಪಡೆದ ಬೌದ್ಧಿಕ ಆಸ್ತಿಯ ಒಂದು ರೂಪವಾಗಿದೆ. ಹಕ್ಕುಸ್ವಾಮ್ಯ ಕಾಯಿದೆ, 1957 (ತಿದ್ದುಪಡಿಗಳನ್ನೊಳಗೊಂಡು)ರ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ, "ಹಕ್ಕುಸ್ವಾಮ್ಯ"- ಮೂಲ ಸಾಹಿತ್ಯ, ನಾಟಕ, ಸಂಗೀತ ಮತ್ತು ಕಲಾತ್ಮಕ ಕೃತಿಗಳು, ಚಲನಚಿತ್ರಗಳು ಮತ್ತು ಧ್ವನಿಮುದ್ರಣವನ್ನು ಒಳಗೊಂಡಿರುತ್ತದೆ.
-
ಒಂದು ಕೃತಿ ಸಾರ್ವಜನಿಕವಾಗಿ ಪ್ರಕಟವಾದ ತಕ್ಷಣ ಅದರ ಹಕ್ಕುಸ್ವಾಮ್ಯ ಲೇಖಕರಿಗೆ ಅಥವಾ ಲೇಖಕರು ನಿಯೋಜಿಸುವ ವ್ಯಕ್ತಿಗೆ ("ಹಕ್ಕುಸ್ವಾಮ್ಯ ಮಾಲೀಕರು") ಸೇರುತ್ತದೆ. ಹಕ್ಕುಸ್ವಾಮ್ಯಕ್ಕಾಗಿ ಕಾನೂನಿನ ಅಡಿಯಲ್ಲಿ ಯಾವುದೇ ಪ್ರತ್ಯೇಕ ನೋಂದಣಿ ಕಡ್ಡಾಯವಲ್ಲ. ಆದರೂ ಹಕ್ಕುಸ್ವಾಮ್ಯ ಮಾಲೀಕರು ಬಯಸಿದರೆ ಕಾನೂನಿನ ಅಡಿಯಲ್ಲಿ ತಮ್ಮ ಕೃತಿಯನ್ನು ನೋಂದಾಯಿಸಬಹುದು.
-
ಹಕ್ಕುಸ್ವಾಮ್ಯ ಮಾಲೀಕರು ಬಯಸಿದಲ್ಲಿ, ತಮ್ಮ ಕೃತಿಯ ಭಾಗಶಃ ಅಥವಾ ಸಂಪೂರ್ಣ ಹಕ್ಕುಸ್ವಾಮ್ಯವನ್ನು, ವಾಣಿಜ್ಯ ಅಥವಾ ವಾಣಿಜ್ಯೇತರ ಕಾರಣಕ್ಕಾಗಿ ನಿರ್ದಿಷ್ಟ ಸ್ವರೂಪದಲ್ಲಿ (ಉದಾ: ಧ್ವನಿ ಮುದ್ರಣ, ಪುಸ್ತಕಗಳು) ನಿರ್ದಿಷ್ಟ ಅವಧಿಯವರೆಗೆ ಯಾವುದೇ ವ್ಯಕ್ತಿಗೆ ತಮ್ಮ ಕೃತಿಯನ್ನು ಬಳಸಿಕೊಳ್ಳಲು ಅನುಮತಿ ನೀಡಬಹುದು. ಕೃತಿಗಳನ್ನು ಅನಧಿಕೃತ ರೀತಿಯಲ್ಲಿ ಬಳಸುವುದನ್ನು ಕಾನೂನುಬದ್ಧವಾಗಿ ತಡೆಯಲು ಸಹ ಹಕ್ಕುಸ್ವಾಮ್ಯ ಮಾಲೀಕರಿಗೆ ಕಾನೂನು ಅನುಮತಿ ನೀಡುತ್ತದೆ.