ಈ ವಿಜೆಟ್‌ನಲ್ಲಿ ನನ್ನ ಸರಣಿಯನ್ನು ನಾನು ಹೇಗೆ ಪ್ರದರ್ಶಿತಗೊಳ್ಳುವಂತೆ ಮಾಡಬಹುದು ?

ಡೈಲಿ ಸೀರೀಸ್ ಸೌಲಭ್ಯವು ಧಾರಾವಾಹಿಗಳಿಗೆ ಮಾತ್ರ ಲಭ್ಯವಿರುತ್ತದೆ. ಮುಖಪುಟದಲ್ಲಿ ಕಾಣುವ ಡೈಲಿ ಸೀರೀಸ್  ವಿಜೆಟ್ ಮುಂಬರುವ ಏಳು ದಿನಗಳವರೆಗೆ ಯಾವೆಲ್ಲ ಧಾರಾವಾಹಿಗಳು ಷೆಡ್ಯೂಲ್ ಆಗಲ್ಪಟ್ಟಿವೆಯೋ ಅವುಗಳನ್ನು ತೋರಿಸುತ್ತವೆ. 

 

ನೀವು ಮುಂದಿನ ಅಧ್ಯಾಯಗಳ ಡ್ರಾಫ್ಟ್ಗಳನ್ನು ರಚಿಸಿ ಮುಂದಿನ ಏಳು ದಿನಗಳ ಅವಧಿಯಲ್ಲಿ ತಾನಾಗಿಯೇ ಪ್ರಕಟವಾಗುವಂತೆ ಷೆಡ್ಯೂಲ್ ಮಾಡಬಹುದು. ಏಳು ದಿನಗಳು ನಿಮ್ಮ ಧಾರಾವಾಹಿ ಮುಖಪುಟದಲ್ಲಿ ಕಾಣಸಿಗುತ್ತದೆ

 

ಈ ಸೌಲಭ್ಯ ಸದ್ಯಕ್ಕೆ ಆ್ಯoಡ್ರಾಯ್ಡ್ ಆ್ಯಪ್ ನಲ್ಲಿ ಮಾತ್ರ ಲಭ್ಯವಿದೆ. 

 

ಷೆಡ್ಯೂಲ್ ಮಾಡುವುದು ಹೇಗೆ ? 

 

ಷೆಡ್ಯೂಲಿಂಗ್ ಸೌಲಭ್ಯ ಕೇವಲ ಧಾರಾವಾಹಿಗಳಿಗೆ ಮಾತ್ರ ಲಭ್ಯವಿದೆ.

 

ಕೆಳಗಿನ ಕ್ರಮ ಅನುಸರಿಸುವ ಮೂಲಕ ನಿಮ್ಮ ಧಾರಾವಾಹಿಯ ಮುಂದಿನ ಅಧ್ಯಾಯವನ್ನು ನಿಗದಿತ ವೇಳೆಗೆ ಪ್ರಕಟಗೊಳ್ಳುವಂತೆ ಷೆಡ್ಯೂಲ್ ಮಾಡಬಹುದು.

 

  • ಪ್ರತಿಲಿಪಿ ಆ್ಯಪ್ ನ ಹೋಂ ಪೇಜ್ ನ ಬರೆಯಿರಿ ಮೇಲೆ ಕ್ಲಿಕ್ ಮಾಡಿ 

  • ಈಗಾಗಲೇ ಪ್ರಕಟಗೊಳ್ಳುತ್ತಿರುವ ನಿಮ್ಮ ಧಾರಾವಾಹಿಯ ಮೇಲೆ ಕ್ಲಿಕ್ ಮಾಡಿ. 

  • ಹೊಸ ಅಧ್ಯಾಯ ಸೇರಿಸಿ ಮೇಲೆ ಕ್ಲಿಕ್ ಮಾಡಿ 

  • ಬರೆಯಲು ಪ್ರಾರಂಭಿಸಿ 

  • ಅಧ್ಯಾಯ ಸಂಪೂರ್ಣವಾದ ಬಳಿಕ ಪ್ರಕಟಿಸುವ ಬದಲು ಸಂರಕ್ಷಿಸಿ ಮೇಲೆ ಕ್ಲಿಕ್ ಮಾಡಿ ಹಿಂದೆ ಬನ್ನಿ 

  • ಈಗ ಸೀರೀಸ್ ಡ್ರಾಫ್ಟ್ ವಿಭಾಗದಲ್ಲಿ ನೀವು ಟೈಪ್ ಮಾಡಿದ ಬರಹ ಲಭ್ಯವಾಗುತ್ತದೆ. 

  • ಅಲ್ಲಿಯೇ ಷೆಡ್ಯೂಲ್ ಮಾಡುವ ವ್ಯವಸ್ಥೆ ಸಹ ಲಭ್ಯವಿರುತ್ತದೆ. 

  • ಬೇಕಾದ ದಿನ ಮತ್ತು ಸಮಯಕ್ಕೆ ಷೆಡ್ಯೂಲ್ ಮಾಡಿ.  

ಗಮನಿಸಿ : 

 

  • ನೀವು ನಿಮಗೆ ಬೇಕೆನಿಸಿದಾಗ ಷೆಡ್ಯೂಲ್ ಮಾಡಿದ ದಿನ ಮತ್ತು ಸಮಯವನ್ನು ಬದಲಿಸಬಹುದು. 

  • ಯಾವುದೇ ಬದಲಾವಣೆಗಳನ್ನು  ಷೆಡ್ಯೂಲ್ ಮಾಡಿದ ಸಮಯಕ್ಕಿಂತ ೩೦ ನಿಮಿಷ ಮೊದಲು ಮಾತ್ರ ಮಾಡಬಹುದು. 

 

ನೀವು ಷೆಡ್ಯೂಲ್ ಮಾಡುವಾಗ ಏನಾದರೂ ಸಮಸ್ಯೆಗಳು ತಲೆದೂರಿದಲ್ಲಿ ನಮ್ಮನ್ನು ಸಂಪರ್ಕಿಸಿ ಸೂಕ್ತ ಮಾಹಿತಿ ಮಾರ್ಗದರ್ಶನ ಪಡೆದುಕೊಳ್ಳಬಹುದು.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?