ನಾವು ಉಲ್ಲಂಘನೆಯನ್ನು ಹೇಗೆ ವಿಚಾರಣೆಗೊಳಪಡಿಸುತ್ತೇವೆ ?

  1. ವೆಬ್‌ಸೈಟ್/ಅಪ್ಲಿಕೇಶನ್‌'ನಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆಯನ್ನು ಕಂಪನಿಯು ಹೇಗೆ ಪರಿಹರಿಸುತ್ತದೆ?

 

ಕಂಪನಿಯು ವೆಬ್‌ಸೈಟ್/ಅಪ್ಲಿಕೇಶನ್‌'ನಲ್ಲಾಗುವ ಯಾವುದೇ ಹಕ್ಕುಸ್ವಾಮ್ಯ ಉಲ್ಲಂಘನೆಯ ಚಟುವಟಿಕೆಯ ಬಗ್ಗೆ ಕಾನೂನುಗಳಿಗೆ ಅನುಸಾರವಾಗಿ ಈ ಕೆಳಗಿನಂತೆ ಕಾರ್ಯನಿರ್ವಹಿಸುತ್ತದೆ:

 

  1. ನೀತಿಯ ಮುಖ್ಯಾಂಶಗಳು

  1. ಕಂಪನಿಯು ಯಾವುದೇ ಹಕ್ಕುಸ್ವಾಮ್ಯ ಮಾಲೀಕರು ("ದೂರುದಾರರು") ನೀಡುವ ಎಲ್ಲಾ ಹಕ್ಕುಸ್ವಾಮ್ಯ ಉಲ್ಲಂಘನೆಯ ದೂರುಗಳನ್ನು ಪರಿಹರಿಸಲು ಮುಂದಾಗುತ್ತದೆ. ದೂರುದಾರರ ಕೃತಿಗಳು ವೆಬ್‌ಸೈಟ್/ಅಪ್ಲಿಕೇಶನ್‌'ನಲ್ಲಿ ಪ್ರಕಟವಾದ ಕೃತಿಯಾಗಿರಬಹುದು ಅಥವಾ ಬಾಹ್ಯ ಮಾಧ್ಯಮದಲ್ಲಿ ಪ್ರಕಟಿಸಿದ್ದಿರಬಹುದು; ಕಂಪನಿಯ ವೆಬ್‌ಸೈಟ್/ಅಪ್ಲಿಕೇಶನ್‌ನಲ್ಲಿ ಅದನ್ನು ನಕಲಿಸಿದರೆ ಮಧ್ಯವರ್ತಿಯಾಗಿ ಕಂಪನಿ ಕಾನೂನುಗಳ ಅನುಸಾರವಾಗಿ ನಡೆದುಕೊಳ್ಳುತ್ತದೆ.

  2. ಹಕ್ಕುಸ್ವಾಮ್ಯ ಮಾಲೀಕತ್ವದ ಸಮರ್ಪಕವಾದ, ಸ್ಪಷ್ಟವಾದ ಪುರಾವೆಗಳು ಮತ್ತು ಹಕ್ಕುಸ್ವಾಮ್ಯ ಉಲ್ಲಂಘನೆಯ ನಿರ್ದಿಷ್ಟ ಚಟುವಟಿಕೆಯನ್ನು ಹಕ್ಕುಸ್ವಾಮ್ಯ ಮಾಲೀಕರು ದೂರಿನ ಜೊತೆಗೆ ನೀಡಿದಾಗ ಕಂಪನಿಯು ದೂರನ್ನು ದಾಖಲಿಸಿಕೊಳ್ಳಲು ಸಾಧ್ಯವಾಗುತ್ತದೆ. ಪುರಾವೆಗಳ ಕೊರತೆಯ ಸಂದರ್ಭದಲ್ಲಿ, ಸ್ವಂತ ವಿವೇಚನೆಯಿಂದ ದೂರನ್ನು ದಾಖಲಿಸಿಕೊಳ್ಳಲು ನಿರಾಕರಿಸುವ ಮತ್ತು/ಅಥವಾ ಹೆಚ್ಚುವರಿ ದಾಖಲೆಗಳನ್ನು ಕೇಳುವ ಹಕ್ಕನ್ನು ಕಂಪನಿಯು ಕಾಯ್ದಿರಿಸಿಕೊಂಡಿದೆ.

  3. ಕಂಪನಿಯು: 

    1. ದೂರುದಾರರ ದೂರು ಅಥವಾ ಇತರ ಬಳಕೆದಾರರ ವರದಿಯ ಮೂಲಕ ಅಥವಾ ವೆಬ್‌ಸೈಟ್/ಅಪ್ಲಿಕೇಶನ್‌’ನಲ್ಲಿ ನಕಲಿಸಲಾದ ಕೃತಿಗಳನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾದ ಆಂತರಿಕ ವ್ಯವಸ್ಥೆಗಳ ಮೂಲಕ ತಿಳಿದುಬಂದ ಹಕ್ಕುಸ್ವಾಮ್ಯ ಉಲ್ಲಂಘನೆಯ ಚಟುವಟಿಕೆಗಳನ್ನು ಪರಿಗಣಿಸುತ್ತದೆ.

    2. ಪ್ರಕಟಿತ ಕೃತಿಗಳು ಮತ್ತು ದೂರುದಾರರ ಕೃತಿಯ ನಡುವೆ ಗಣನೀಯ ಸಾಮ್ಯತೆ ಇರುವಲ್ಲಿ (ಕಂಪನಿಯು ಪ್ರಕರಣ/ಸಂದರ್ಭದ ಆಧಾರದ ಮೇಲೆ ಅಂತಹ ಹೋಲಿಕೆಯನ್ನು ನಿರ್ಣಯಿಸುತ್ತದೆ) ಪ್ರಕಟಣೆಯ ದಿನಾಂಕವನ್ನು ಪರಿಗಣನೆಗೆ ತೆಗೆದುಕೊಂಡು ದೂರನ್ನು ದಾಖಲಿಸಿಕೊಳ್ಳುತ್ತದೆ. 

    3. ಭಾಗಶಃ ಹೋಲಿಕೆಯ ಸಂದರ್ಭಗಳಲ್ಲಿ, 

      1. ಹಕ್ಕುಸ್ವಾಮ್ಯ ಉಲ್ಲಂಘನೆ ಅಸ್ತಿತ್ವ ಅಥವಾ ಸಾಧ್ಯತೆಯ ಮೇಲೆ ನಿರ್ಣಯವಾಗುವುದಿಲ್ಲ. ಇದು ಕಥಾವಸ್ತುಗಳು, ಪಾತ್ರಗಳು, ಕಥಾಹಂದರ ಮುಂತಾದವುಗಳ ಹೋಲಿಕೆಯ ಮೇಲೆ ಅವಲಂಬಿತವಾಗಿದೆ.

      2. ಪ್ರಕಟಿತ ಕೃತಿಯನ್ನು ಅಪ್ರಕಟಿತಗೊಳಿಸುವ ಮೊದಲು ವಿವಿಧ ಅಂಶಗಳನ್ನು ಪರಿಗಣಿಸಲಾಗುತ್ತದೆ. ಉದಾಹರಣೆಗೆ:  ಹಕ್ಕುಸ್ವಾಮ್ಯ ಮಾಲೀಕರಿಂದ ಪಡೆದ ದೂರು, ಯಾವುದೇ ಇತರ ಬಳಕೆದಾರರಿಂದ ಅಥವಾ ಕಂಪನಿಯ ಆಂತರಿಕವಾಗಿ ಅಭಿವೃದ್ಧಿಪಡಿಸಿದ ಪರಿಕರಗಳಿಂದ ಪತ್ತೆಯಾದ ಹೋಲಿಕೆಯ ಮಟ್ಟ, ಇತ್ಯಾದಿ…

      3. ಯಾವ ಲೇಖಕರ ವಿರುದ್ಧ ದೂರು ದಾಖಲಾಗಿದೆಯೋ ಅವರಿಗೆ ದೂರಿನ ಸಿಂಧುತ್ವದ ಬಗ್ಗೆ ಅವರ ಅನಿಸಿಕೆ ಹೇಳಲು ಅವಕಾಶವನ್ನು ನೀಡಲಾಗುತ್ತದೆ.

      4. ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಲು ದೂರುದಾರ ಮತ್ತು ಸಂಬಂಧಪಟ್ಟ ಲೇಖಕರನ್ನು ಪ್ರೋತ್ಸಾಹಿಸಲಾಗುತ್ತದೆ.

      5. ಹಕ್ಕುಸ್ವಾಮ್ಯ ಉಳ್ಳವರಿಂದ ದೂರು ದಾಖಲಾಗಿದ್ದರೆ, ದೂರು ಸ್ವೀಕರಿಸಿದ ದಿನಾಂಕದಿಂದ 21 ದಿನಗಳೊಳಗೆ ಕೃತಿಯನ್ನು ತೆಗೆದುಹಾಕುವ ಪ್ರಕ್ರಿಯೆ ಆರಂಭವಾಗುತ್ತದೆ. ಯಾವ ಲೇಖಕರ ವಿರುದ್ಧ ದೂರು ದಾಖಲಾಗಿದೆಯೋ ಅವರು ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿದರೆ, ಕಂಪನಿಯ ಅಪ್ಲಿಕೇಶನ್/ ವೆಬ್‌ಸೈಟ್‌ನಿಂದ ಪ್ರಕಟಿತ ಕೃತಿಗಳನ್ನು ತೆಗೆದುಹಾಕಲು ನ್ಯಾಯಾಲಯದಿಂದ ಆದೇಶವನ್ನು ಪಡೆಯಲು ಸೂಕ್ತ ನ್ಯಾಯಾಲಯಗಳಲ್ಲಿ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಲು ದೂರುದಾರರಿಗೆ ನಿರ್ದೇಶಿಸಲಾಗುತ್ತದೆ. ಮತ್ತು ಕಂಪನಿಯು ನ್ಯಾಯಾಲಯದ ಆದೇಶವನ್ನು ಪಾಲಿಸುತ್ತದೆ. 21 ದಿನಗಳ ಅವಧಿಯ ನಂತರ ದೂರುದಾರರಿಂದ ಕಾನೂನು ಆದೇಶವನ್ನು ಸ್ವೀಕರಿಸುವವರೆಗೆ, ಕಂಪನಿಯು ಆ ಕೃತಿಯನ್ನು ಉಳಿಸಿಕೊಳ್ಳುವ ಅಥವಾ ತೆಗೆದುಹಾಕುವ ಹಕ್ಕನ್ನು ಕಾಯ್ದಿರಿಸಿಕೊಂಡಿದೆ.

      6. ದೂರುದಾರ ಯಾರ ವಿರುದ್ಧ ದೂರನ್ನು ದಾಖಲಿಸಿದ್ದಾರೋ ಅವರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವುದಕ್ಕಾಗಿ ಸ್ವತಂತ್ರ ಕಾನೂನು ಸಲಹೆಯನ್ನು ಪಡೆಯಬೇಕು. ಕಂಪನಿಯು ಆ ಬಗ್ಗೆ ಸಲಹೆ ನೀಡಲು ಸಾಧ್ಯವಿಲ್ಲ.

 

  1. ಕಾಲಾವಧಿಗಳು 

ಹಕ್ಕುಸ್ವಾಮ್ಯ ಉಲ್ಲಂಘನೆಯ ದೂರು ಮತ್ತು ಅದರ ಪ್ರಕ್ರಿಯೆಗಳಿಗೆ ಈ ಕೆಳಗಿನ ಕಾಲಾವಧಿಗಳು ಅನ್ವಯವಾಗುತ್ತವೆ:

 

  1. 24 ಗಂಟೆಗಳ ಒಳಗೆ ದೂರಿನ ಸ್ವೀಕೃತಿ.

  2. ಪ್ರಕಟಿತ ಕೃತಿಯನ್ನು 36 ಗಂಟೆಗಳ ಒಳಗೆ ತೆಗೆದುಹಾಕುವುದು (ಆ ಮೊದಲು ದೂರನ್ನು ಪರಿಹರಿಸಲಾಗದಿದ್ದಲ್ಲಿ).

  3. ಕೃತಿಯ ಪ್ರಕಟಣೆಗೆ 21 ದಿನಗಳವರೆಗೆ ಅನುಮತಿ ನೀಡದಿರುವುದು (ಆ ಮೊದಲು ದೂರನ್ನು ಪರಿಹರಿಸಲಾಗದಿದ್ದಲ್ಲಿ).

  4. 15 ಕಾರ್ಯಾವಧಿ ದಿನಗಳಲ್ಲಿ ಸಮಸ್ಯೆಯನ್ನು ಪರಿಹರಿಸುವುದು.

 

  1. ಹಕ್ಕುಸ್ವಾಮ್ಯ ಉಲ್ಲಂಘನೆಯ ದೂರನ್ನು ಸಲ್ಲಿಸುವುದು ಹೇಗೆ?

ಈ ಕೆಳಗಿನ ಮಾಹಿತಿಗಳೊಂದಿಗೆ ಶ್ರೀ. ಜಿತೇಶ್ ದೊಂಗ ಅವರಿಗೆ [email protected] ವಿಳಾಸಕ್ಕೆ ಈಮೇಲ್ ಬರೆಯುವ ಮೂಲಕ ದೂರು ಸಲ್ಲಿಸಬೇಕು:

 

  1. ಕೃತಿಯ ವಿವರಣೆಯೊಂದಿಗೆ ಹಕ್ಕುಸ್ವಾಮ್ಯ ಉಲ್ಲಂಘನೆಯನ್ನು ಗುರುತಿಸಲು ವೆಬ್‌ಸೈಟ್/ಅಪ್ಲಿಕೇಶನ್‌’ನಲ್ಲಿರುವ ಲಿಂಕ್ ಸೇರಿದಂತೆ ಸಾಕಷ್ಟು ಮಾಹಿತಿ;

  2. ದೂರುದಾರರು ಹಕ್ಕುಸ್ವಾಮ್ಯ ಮಾಲೀಕರು ಅಥವಾ ಪ್ರಕಟಿತ ಕೃತಿಯಲ್ಲಿ ಹಕ್ಕುಸ್ವಾಮ್ಯದ ವಿಶೇಷ ಪರವಾನಗಿದಾರರು ಎಂದು ಸಾಬೀತು ಪಡಿಸುವ ವಿವರಗಳು, ಅಥವಾ ದೂರು ನೀಡಿದವರು  ಬಳಕೆದಾರರಾಗಿದ್ದರೆ, ಹಕ್ಕುಸ್ವಾಮ್ಯ ಉಲ್ಲಂಘನೆಯ ಪುರಾವೆಯನ್ನು ದೃಢೀಕರಿಸುವ  ದಾಖಲಾತಿ;

  3. ಪ್ರಕಟಿತ ಕೃತಿಯು ದೂರುದಾರರ ಮಾಲೀಕತ್ವದ ಕೃತಿಯ  ನಕಲು ಎಂದು ಸಾಬೀತು ಪಡಿಸುವ ವಿವರಗಳು.  ಆಪಾದಿತ ಕೃತಿ ಹಕ್ಕುಸ್ವಾಮ್ಯ ಕಾಯಿದೆ, 1957 ರ ಸೆಕ್ಷನ್ 52 ಅಥವಾ ಹಕ್ಕುಸ್ವಾಮ್ಯ ಕಾಯಿದೆ, 1957 ನಿಂದ ಅನುಮತಿಸಲಾದ ಯಾವುದೇ ಇತರ ಕಾಯ್ದೆಯ ಅಡಿಯಲ್ಲಿ ರಕ್ಷಿಸಲ್ಪಟ್ಟಿರಬಾರದು;

  4. ಕೃತಿಯನ್ನು ಪ್ರಕಟಿಸಿದ ವೆಬ್‌ಸೈಟ್/ಅಪ್ಲಿಕೇಶನ್‌'ನ ವಿವರಗಳು ಅಥವಾ ಪುಸ್ತಕವಾಗಿದ್ದರೆ, ISBN ಸಂಖ್ಯೆ ಮತ್ತು ಮೂಲ ಕೃತಿಯ ಪ್ರಕಟಣೆಯ ಮಾಧ್ಯಮವನ್ನು ಅವಲಂಬಿಸಿ  ಇತರ ವಿವರಗಳು;

  5. ಹಕ್ಕುಸ್ವಾಮ್ಯವನ್ನು ಉಲ್ಲಂಘಿಸುವ  ಕೃತಿಯನ್ನು ಪ್ರಕಟಣೆ ಮಾಡಲು ಯಾರು ಜವಾಬ್ದಾರರಾಗಿದ್ದಾರೆ ಎಂಬದು ತಿಳಿದಿದ್ದರೆ ಆ ಮಾಹಿತಿ/ಬಳಕೆದಾರರ ವಿವರಗಳು (ಪ್ರೊಫೈಲ್ ಹೆಸರು, ಪ್ರೊಫೈಲ್‌ ಲಿಂಕ್); ಮತ್ತು

  6. ಯಾರು  ನ್ಯಾಯಾಲಯದಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆಯ ಮೊಕದ್ದಮೆಯನ್ನು ಸಲ್ಲಿಸುತ್ತಾರೆ ಮತ್ತು ನ್ಯಾಯಾಲಯದ ಆದೇಶವನ್ನು 21 ದಿನಗಳ ಅವಧಿಯೊಳಗೆ ಕಂಪನಿಗೆ ಸಲ್ಲಿಸುತ್ತಾರೆ; ಆ ಅಧಿಕಾರ ಹೊಂದಿರುವ ಬಳಕೆದಾರರ ವಿವರಗಳು (ಪ್ರೊಫೈಲ್ ಹೆಸರು, ಪ್ರೊಫೈಲ್‌ ಲಿಂಕ್) 

 

  1. ಹಕ್ಕುಸ್ವಾಮ್ಯ ನೀತಿಯ ಜಾರಿ

ದೂರಿನ ಸ್ವರೂಪ ಮತ್ತು  ಅಂತಿಮ ನಿರ್ಣಯವನ್ನು ಅವಲಂಬಿಸಿ, ಕಂಪನಿಯು ಈ ಕೆಳಗಿನ ಒಂದು ಅಥವಾ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬಹುದು:

  1. ಪ್ರಕಟಿತ ಕೃತಿಗಳನ್ನು ಕರಡು ಸ್ಥಿತಿಗೆ(ಡ್ರಾಫ್ಟ್) ಸೇರಿಸುವುದು. ಲೇಖಕರು ಕಂಪನಿಯ ಅನುಮತಿಯಿಲ್ಲದೆ ಅದನ್ನು ಮರು-ಪ್ರಕಟಿಸಲು ಸಾಧ್ಯವಿಲ್ಲ.

  2. ಲೇಖಕರ ಪ್ರೊಫೈಲ್‌ನಿಂದ ಪ್ರಕಟಿತ ಕೃತಿಗಳನ್ನು ಶಾಶ್ವತವಾಗಿ ಅಳಿಸಿಹಾಕುವುದು. ಲೇಖಕರು ಅದನ್ನು ಮರು-ಪ್ರಕಟಿಸಲು ಸಾಧ್ಯವಿಲ್ಲ.

  3. ಯಾವುದೇ ಲೇಖಕರ ಪ್ರೊಫೈಲ್‌ನ ಕೃತಿಗಳ ಮೇಲೆ 2 ಅಥವಾ ಹೆಚ್ಚಿನ ಉಲ್ಲಂಘನೆ ಸಾಬೀತಾದಲ್ಲಿ ಮತ್ತು ಪ್ರಕಟಿತ ಕೃತಿಗಳನ್ನು ಉಲ್ಲಂಘನೆಯ ಕಾರಣದಿಂದ ಶಾಶ್ವತವಾಗಿ ಅಳಿಸಿದರೆ, ಕಂಪನಿಯು ಬಳಕೆದಾರರ ಪ್ರೊಫೈಲ್ ಅನ್ನು ವೆಬ್‌ಸೈಟ್/ಅಪ್ಲಿಕೇಶನ್‌'ನಿಂದ ನಿರ್ಬಂಧಿಸಬಹುದು (ಇದು ಬಳಕೆದಾರರನ್ನು ನಿಷ್ಕ್ರಿಯಗೊಳಿಸುತ್ತದೆ. ನಿರ್ಬಂಧಿಸಿದ ಪ್ರೊಫೈಲ್‌ನ ರುಜುವಾತುಗಳನ್ನು ಬಳಸಿಕೊಂಡು ವೆಬ್‌ಸೈಟ್/ಅಪ್ಲಿಕೇಶನ್‌'ಗೆ ಲಾಗ್ ಇನ್ ಆಗಲು ಸಾಧ್ಯವಿಲ್ಲ. ಎಲ್ಲಾ ಪ್ರಕಟಿತ ಕೃತಿಗಳನ್ನು  ಒಳಗೊಂಡಂತೆ ಬಳಕೆದಾರರ ಎಲ್ಲಾ ಸಂಗತಿಗಳನ್ನು ತೆಗೆದುಹಾಕಲಾಗುತ್ತದೆ. ನಿರ್ಬಂಧಿಸುವ ಮೊದಲು ಪ್ರಕಟಿತ ಕೃತಿಗಳ ಬ್ಯಾಕ್-ಅಪ್ ತೆಗೆದುಕೊಳ್ಳಲು ಕಂಪನಿಯು ಬಳಕೆದಾರರಿಗೆ 24 ಗಂಟೆಗಳ ಕಾಲಾವಕಾಶವನ್ನು ನೀಡುತ್ತದೆ).

 

  1. ಬಾಹ್ಯ ಮಾಧ್ಯಮದಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆ

ಅನೇಕ ಲೇಖಕರು ತಮ್ಮ ಪ್ರಕಟಿತ ಕೃತಿಗಳನ್ನು ಮೂರನೇ ವ್ಯಕ್ತಿಗಳು ಬಾಹ್ಯ ಮಾಧ್ಯಮಗಳಲ್ಲಿ ಅನಧಿಕೃತವಾಗಿ ನಕಲು ಮಾಡಿರುವ ಸಂದರ್ಭಗಳನ್ನು ಎದುರಿಸಿದ್ದಾರೆ ಎಂದು ನಮಗೆ ತಿಳಿದುಬಂದಿದೆ.

 

ಹಕ್ಕುಸ್ವಾಮ್ಯದ ಉಲ್ಲಂಘನೆಗಾಗಿ ಲೇಖಕರು ಸಂಬಂಧಪಟ್ಟ ಮಾಧ್ಯಮಗಳಲ್ಲಿ ತಕ್ಷಣವೇ ವರದಿಗಳನ್ನು ಸಲ್ಲಿಸಬೇಕು. ಸಮಸ್ಯೆಯನ್ನು ಪರಿಹರಿಸಲಾಗದಿದ್ದರೆ, ಸೂಕ್ತವಾದ ಕಾನೂನು ಸಲಹೆಯನ್ನು ಪಡೆಯಲು ನಾವು ಸಲಹೆ ನೀಡುತ್ತೇವೆ.

 

ಈ ಲೇಖನ ನಿಮಗೆ ಸಹಾಯಕವಾಗಿದೆಯೇ?