pratilipi-logo ಪ್ರತಿಲಿಪಿ
ಕನ್ನಡ

'ನಗುನಗುತಾ ನಲೀ ನಲಿ ' –ಏಪ್ರಿಲ್ ತಿಂಗಳ ಸ್ಪರ್ಧೆಯ ಫಲಿತಾಂಶ.

11 ಜೂನ್ 2018

ನಗುನಗುತಾ ನಲೀ ನಲಿ ಆನ್ಲೈನ್ ಹಾಸ್ಯ ಬರಹ ಸ್ಪರ್ಧೆಯ ಫಲಿತಾಂಶ 

ಆತ್ಮೀಯ ಸಾಹಿತ್ಯಾಭಿಮಾನಿಗಳೇ ,

'ಪ್ರತಿಲಿಪಿ ಕನ್ನಡ' ಆಯೋಜಿಸಿದ್ದ 'ನಗುನಗುತಾ ನಲಿ ನಲಿ' ಆನ್ಲೈನ್ ಹಾಸ್ಯ ಬರಹ  ಸ್ಪರ್ಧೆಗೆ ನಿಮ್ಮಿಂದ ಅತ್ಯದ್ಭುತ ಪ್ರತಿಕ್ರಿಯೆ ದೊರಕಿದ್ದು ನಮಗೆ ಅತೀವ ಹರ್ಷವನ್ನುಂಟು ಮಾಡಿದೆ.. ಇವುಗಳನ್ನು ಕೇವಲ ಕರ್ನಾಟಕ ರಾಜ್ಯ ಮಾತ್ರವಲ್ಲದೆ ವಿಶ್ವಾದ್ಯಂತ ಇರುವ ಕನ್ನಡ ಸಾಹಿತ್ಯಾಭಿಮಾನಿಗಳ ಎದಿರು ತೆರೆದಿಟ್ಟು ಅವರನ್ನೂ ನಿಮ್ಮ ಬರಹಗಳಿಂದ ಸಂತೃಪ್ತಿಗೊಳಿಸಿದ ಹೆಮ್ಮೆ,ಸಮಾಧಾನ ನಮಗಿದೆ. ಕನ್ನಡದ ಸಾಹಿತ್ಯವನ್ನು ಓದುವವರು ಬರೆಯುವವರು ಆಸ್ವಾಧಿಸುವವರು ಕಡಿಮೆಯಾಗುತ್ತಿದ್ದಾರೆಂಬ ಸಿನಿಕತನದ ಹೇಳಿಕೆಗಳು ಸುಳ್ಳೆಂದು ನಿಮ್ಮ ಕಲ್ಪನೆಯಲ್ಲಿ ಅರಳಿ, ನಮ್ಮ ವೇದಿಕೆಯ ಮೂಲಕ ಪ್ರಕಟವಾದ ಹಾಸ್ಯ ಬರಹಗಳು ನಿರೂಪಿಸಿವೆ. ಇದರ ಫಲಿತಾಂಶವನ್ನು ಬಹಳಷ್ಟು ಅಳೆದು ತೂಗಿ ವಿವಿಧ ಮಾನದಂಡಗಳನ್ನು ಅನುಸರಿಸಿ ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಿ ಹೊರತರಲಾಗಿದೆ.

ಈ ಸ್ಪರ್ಧೆಯ ವಿಜೇತರನ್ನು 'ಓದುಗರ ಆಯ್ಕೆ' ಮತ್ತು 'ತೀರ್ಪುಗಾರರ ಆಯ್ಕೆ' ಈ ಎರಡೂ ವಿಭಾಗಗಳಲ್ಲಿ  ಆರಿಸಲಾಗಿದೆ.ಓದುಗರ ಆಯ್ಕೆ ಎಂದಾಗ ಅದು ಕೇವಲ ಓದಿದವರ 'ಸಂಖ್ಯೆ'ಯಾಗಿರದೇ, ಒಟ್ಟು ಓದುಗರು, ಅವರು ವ್ಯಯಿಸಿದ ಸಮಯ, ಪ್ರತೀ ಬರಹದ ಮೂಲಕ ಪ್ರತಿಲಿಪಿಗೆ ಮೊದಲ ಬಾರಿಗೆ ಭೇಟಿ ನೀಡಿದ ಓದುಗರ ಸಂಖ್ಯೆ, ಸರಾಸರಿ ರೇಟಿಂಗ್, ಚರ್ಚೆಗೊಳಗಾದ ವಿಷಯ,ವ್ಯಾಕರಣ ಶುದ್ಧತೆ,ಚಿತ್ರಗಳ ಆಯ್ಕೆ – ಹೀಗೇಅನೇಕ  ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ಷ್ಮ ಅವಲೋಕನದ ಮೂಲಕ ಬರಹದ ಪ್ರತೀ ತಾಂತ್ರಿಕ ಮಾಹಿತಿಗಳನ್ನೂ ಅಳೆದೂ ತೂಗಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. 'ತೀರ್ಪುಗಾರರ ಆಯ್ಕೆ' ಯ ವಿಜೇತರನ್ನು  ಶ್ರೀಯುತ ತಿರುಮಲ ಮಾವಿನಕುಳಿಯವರು ತಮ್ಮ ಬಿಡುವಿಲ್ಲದ ಕೆಲಸ  ಕಾರ್ಯಗಳ ನಡುವೆ ನಮಗಾಗಿ ಸಮಯ ಮೀಸಲಿರಿಸಿ  ಆರಿಸಿರುತ್ತಾರೆ. ಅವರಿಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು. 

ವಿಜೇತ ಸಾಹಿತಿಗಳಿಗೆ ಪ್ರತಿಲಿಪಿಯ ಕಡೆಯಿಂದ ನಗದು ಬಹುಮಾನ ಮತ್ತು ಪ್ರಮಾಣಪತ್ರ ನೀಡಲಾಗುತ್ತದೆ. ಹಾಗೂ ಓದುಗರ ಆಯ್ಕೆಯ ಮೊದಲ ಇಪ್ಪತ್ತು ಕೃತಿಗಳ ಕರ್ತೃಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಗುತ್ತದೆ. ಇದನ್ನು ಆಯಾ ಸಾಹಿತಿಗಳ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವುದು.

ಸ್ಪರ್ಧೆಯಲ್ಲಿ ವಿಜೇತರಾದವರು :

ತೀರ್ಪುಗಾರರ ಪ್ರಥಮ ಆಯ್ಕೆ:

ಶ್ರೀಮತಿ ಸರೋಜಾ ಪ್ರಭಾಕರ್ ಗಾಂವಕರ್ ಅವರ 

ಬೆಮಸಾಸಂ ಬಸ್ಸಿನ ಪಯಣಪ್ರಸಂಗಗಳು

 

ತೀರ್ಪುಗಾರರ ದ್ವಿತೀಯ ಆಯ್ಕೆ:

ಶ್ರೀ ಕೆ. ಪಿ. ಸತ್ಯನಾರಾಯಣ ಅವರ 

ನೇಮ್‍ಲೆಸ್ ಕ್ವೀನ್ - ಅನಾಮಿಕಾ ಪ್ರಿನ್ಸ್

 

ಓದುಗರ ಪ್ರಥಮ ಆಯ್ಕೆ:

ಶ್ರೀ ರವಿ ಅಯ್ಯಂಗಾರ್  ಅವರ 

“ಎಪರೇಶಿ” ಎಚ್ಚರ ತಪ್ಪಿದಾಗ !

 

ಓದುಗರ ದ್ವಿತೀಯ ಆಯ್ಕೆ:

ಶ್ರೀಮತಿ ಉಮಾ ಬಾಲರಾಜ್ "ಜಾಜಿಶ್ರೀ" ಅವರ 

ಗಂಗಾ ಪ್ರಸಂಗ

 

ಓದುಗರ ಆಯ್ಕೆಯ ಮೊದಲ ಇಪ್ಪತ್ತು ಕೃತಿಗಳು:

Title of the Content Author Read count Ratings count Avg Rating Reading time taken (sec) Actual reading Time (sec) Time Factor Reader Points Rating Count points Avg Rating points Time points Final mark Rank
“ಎಪರೇಶಿ” ಎಚ್ಚರ ತಪ್ಪಿದಾಗ ! ರವಿ ಅಯ್ಯಂಗಾರ್ "ಸುಮನರವಿ" 958 188 4.72 155 177 0.88 0.724 1.000 0.944 0.189 0.738 1
ಗಂಗಾ ಪ್ರಸಂಗ ಉಮಾ ಬಾಲರಾಜ್ "ಜಾಜಿಶ್ರೀ" "ಜಾಜಿಶ್ರಿ" 1119 131 4.91 591.6755556 1026 0.58 0.845 0.697 0.982 0.124 0.712 2
ಯಡವಟ್ಟಿನ ದಿನ .... ಆರತಿ ಘಟಿಕಾರ್ 1324 20 4.85 275.5685279 270 1.02 1.000 0.106 0.970 0.220 0.656 3
ಮೊದಲ ಭೇಟಿ ಪ್ರಸಂಗ ishwar sangolli 1099 42 4.36 143.4254279 85 1.69 0.830 0.223 0.872 0.363 0.628 4
ಪಾಕಡಾ ಹೆಂಡತಿ ಗೀತಾ ಹೆಗಡೆ 1219 13 4.15 84.75940594 44 1.93 0.921 0.069 0.830 0.415 0.622 5
ಮೊದಲ ಬಿಯರ್ ಪುರಾಣ Gururaj Kodkani 782 9 4.67 301 195 1.54 0.591 0.048 0.934 0.332 0.533 6
ರತ್ನಾ.... Gururaj Kodkani 887 8 4.38 391 311 1.26 0.670 0.043 0.876 0.271 0.526 7
ಹೀಗೊಂದು ಸರ್‍ಪ್ರೈಸ್ ಟೆಸ್ಟ್..! ತ್ರಿಲೋಕ್ ತ್ರಿವಿಕ್ರಮ 649 34 4.68 232 166 1.40 0.490 0.181 0.936 0.301 0.524 8
ಹೀಗೊಂದು ಆಟೋರಾಜನ ಆಟಾಟೋಪ … ಆರತಿ ಘಟಿಕಾರ್ 832 7 4.57 335.4756672 304 1.10 0.628 0.037 0.914 0.238 0.518 9
ವಾಕ್_ಪ್ರಸಂಗ ಚಂದ್ರಶೇಖರ್ ಪಿ ಎಸ್ 714 21 4.43 155 114 1.36 0.539 0.112 0.886 0.293 0.509 10
ಬೂಂದಿಲಾಡು ಸುಬ್ರಹ್ಮಣ್ಯ ಶಾಸ್ತ್ರಿ "ತಪಸ್ವಿ" 578 49 4.92 482.8220859 1244 0.39 0.437 0.261 0.984 0.084 0.495 11
ಭಾಷೆ ಗೊತ್ತಿರದ ಊರಲ್ಲಿ ಪ್ರವೀಣ್ ಬುಕ್ಶೆಟ್ಟಿ "ಪ್ರಬು" 576 3 4.67 235.40399 156 1.51 0.435 0.016 0.934 0.325 0.479 12
ರಾಜಕುಮಾರಿ ಮತ್ತು ಕಪ್ಪೆ ಸುರೇಶ.ಎಸ್, ಲಮಾಣಿ 880 15 3.13 122 71 1.72 0.665 0.080 0.626 0.370 0.477 13
ಅಣುಕುವಾರ್ತೆ ಪದ್ಮನಾಭ ಡಿ 41 3 4.33 130 28 4.64 0.031 0.016 0.866 1.000 0.472 14
“ಮುದ್ದೆ ನೀನೆಲ್ಲೆಡಯೂ ಇದ್ದೆ” BR Sathyanarayan Rao 248 15 4.93 273 127 2.15 0.187 0.080 0.986 0.464 0.461 15
ಮೆಸೇಜ ಆವಾ೦ತರ..! ಶ್ರೀಧರ ಗಿಂಡೆ "ರಮಾಚಂದ್ರಸುತ" 467 5 5 171.6346749 156 1.10 0.353 0.027 1.000 0.237 0.459 16
ಇಹೆನ ಪದ್ಮ ಎಂ ವರ್ಮ "ನಿಹಾರಿಕೆ" 386 37 4.78 382.3712121 376 1.02 0.292 0.197 0.956 0.219 0.457 17
ನೇಮ್‍ಲೆಸ್ ಕ್ವೀನ್ - ಅನಾಮಿಕಾ ಪ್ರಿನ್ಸ್ ಕೆ. ಪಿ. ಸತ್ಯನಾರಾಯಣ 268 48 4.85 362 305 1.19 0.202 0.255 0.970 0.256 0.454 18
ಕ್ಷೌರಿಕ ಮತ್ತು ಶ್ವಾನದ೦ಗಡಿ Gururaj Kodkani 457 9 4.56 231 151 1.53 0.345 0.048 0.912 0.330 0.453 19

ದ್ವಿ ಕಳತ್ರ ಯೋಗ

ಸುಮಾ ಕಳಸಾಪುರ "ಸುಮಾ ಕಳಸಾಪುರ" 332 58 4.67 163 224 0.73 0.251 0.309 0.934 0.157 0.449 20

ಎಲ್ಲಾ ಸಾಹಿತಿಗಳಿಗೆ ಅಭಿನಂದನೆಗಳು. ಪ್ರಮಾಣಪತ್ರಗಳನ್ನು ಶೀಘ್ರದಲ್ಲಿ ಇಮೇಲ್ ಮಾಡಲಾಗುವುದು.

ಅಕ್ಷಯ್ ಬಾಳೆಗೆರೆ